ಚಿಕ್ಕಮಗಳೂರು: ಸ್ವಾತಂತ್ರ್ಯದ ನಂತರ ಬಂದ ಸರ್ಕಾರ ಭಾರತದ ಮೇಲೆ ಆಕ್ರಮಣ ಮಾಡಿದ ಬ್ರಿಟೀಷರನ್ನು ಲಾರ್ಡ್ ಎಂದೆಲ್ಲಾ ಗುರುತಿಸಿ ಶಿಕ್ಷಣ ನೀಡಿದೆ. ಆ ಪಠ್ಯ ತಿದ್ದುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಹೇಳಿದ್ದಾರೆ.
ಭಾರತ ಎಂಬ ನದಿಗೆ ರಾಮಾಯಣ ಮತ್ತು ಮಹಾಭಾರತ ದಂಡೆಗಳಿದ್ದಂತೆ. ಆ ಎರಡು ಗ್ರಂಥದ ಸಾರದಲ್ಲಿ ಶಿಕ್ಷಣ ಬಂದರೆ ಧರ್ಮ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಭಗವದ್ಗೀತೆಯಲ್ಲಿ ಕೃಷ್ಣ ಬದುಕಿನ ಸಾರವನ್ನು ಹೇಳಿದ್ದಾನೆ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದರಲ್ಲಿ ತಪ್ಪಿಲ್ಲ. ಈ ರೀತಿಯ ಚಿಂತನೆಗೆ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ದಿ ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಸಿದ್ದರಾಮಯ್ಯ ಆಕ್ಷೇಪಕ್ಕೆ ಶಾಸಕ ಸಿ ಟಿ ರವಿ ಟೀಕೆ