ಚಿಕ್ಕಮಗಳೂರು : ಲೂಟಿ ರವಿ ಮೊದಲು ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ ಎಂಬ ಬಿ ಕೆ ಹರಿಪ್ರಸಾದ್ ಹೇಳಿಕೆಗೆ ಜಿಲ್ಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದ್ದಾರೆ. ಹಫ್ತಾ ಗ್ಯಾಂಗ್ ನಾಯಕರೆಲ್ಲಾ ಪೊಲಿಟಿಕಲ್ ಲೇಬಲ್ ಅಂಟಿಸಿಕೊಂಡರೆ ಲೀಡರ್ ಆಗೋಕೆ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹರಿಪ್ರಸಾದ್ ಒಂದು ಕಾಲದಲ್ಲಿ ಹಫ್ತಾ ವಸೂಲಿ ಗ್ಯಾಂಗಿನಲ್ಲಿದ್ದವರು. ಹರಿಪ್ರಸಾದ್ ನನಗೆ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ. ಹರಿಪ್ರಸಾದ್ ಈವರೆಗೂ ಒಂದೇ ಒಂದು ಚುನಾವಣೆಯಲ್ಲಿ ಗೆದ್ದಿಲ್ಲ, ಗೆಲ್ಲೋಕೆ ಸಾಧ್ಯವೂ ಇಲ್ಲ ಎಂದು ಹೇಳಿದರು. ಇವರ ರೀತಿಯಲ್ಲಿ ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನೂ ಅಲ್ಲ. ನಾನು ಹಪ್ತಾ ವಸೂಲಿ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಭಯೋತ್ಪಾದಕ ಕೃತ್ಯಗಳಿಗೆ ಬೆಂಗಾವಲಾಗಿ ನಿಂತ ಕಾಂಗ್ರೆಸ್ ಬ್ಯಾನ್ ಮಾಡಿ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್