ಚಿಕ್ಕಮಗಳೂರು : ಡಿಸಿಎಂ ಡಿ ಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಹಾಲಿಂದು ಹಾಲಿಗ, ನೀರಿಂದು ನೀರಿಗೆ. ಉಪ್ಪು ತಿಂದೋನು ನೀರು ಕುಡಿಯಲೇಬೇಕು ಎಂದು ವ್ಯಂಗ್ಯವಾಡಿದರು.
ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು, ಪ್ರಮಾಣಿಕರಿಗೆ ತೊಂದರೆ ಆಗಬಾರದು. ಯಾರಾದರೂ ಅಕ್ರಮ ಮಾಡಿದ್ರೆ ಅದು ಇಂದಲ್ಲ ನಾಳೆ ಬಯಲಿಗೆ ಬರಬೇಕು. ಸುಮ್ನೆ ಸುಮ್ನೆ ಗಾದೆ ಹುಟ್ಟುತ್ತಾ. ತಲೆತಲಾಂತರದ ಸತ್ಯ ಇರುತ್ತೆ. ಊರಿಗೆ ಬಂದೋಳು ನೀರಿಗೆ ಬರಲ್ವಾ, ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್, ಡ್ಯಾಶ್ ಎಂದು ವಾಗ್ದಾಳಿ ನಡೆಸಿದರು.
ಸತ್ಯವನ್ನು ಹೂತು ಹಾಕಲು ಆಗಲ್ಲ, ಕೆಲ ಕಾಲ ಮುಚ್ಚಿಡಬಹುದು. ಯಾರಾದ್ರು ತಪ್ಪು ಮಾಡಿರೋರು ಇದ್ರೆ ಶಿಕ್ಷೆ ಆಗಬೇಕು. ಕಾನೂನಿಗಿಂತ ಅತಿಥರಾದವರು ಯಾರಾದರೂ ಇದ್ದೀವಾ?. ನಾನು, ಸಿಎಂ, ಡಿಸಿಎಂ, ಪ್ರಧಾನಿ ಯಾರೂ ಕಾನೂನಿಗೆ ಅತಿಥರಲ್ಲ. ನಾವು ಯಾರಾದ್ರು above the law ಅನ್ಕೊಂಡಿದ್ರೆ ಅದಕ್ಕೆ ಸಂವಿಧಾನ ಅವಕಾಶ ನೀಡಿಲ್ಲ. ಅಂಬೇಡ್ಕರ್ ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದಿದ್ದಾರೆ. ಇವರಿಗೆ ಕಾನೂನು ಅನ್ವಯ ಆಗಲ್ಲ, ಏನ್ ಮಾಡಿದರೂ ನಡೆಯುತ್ತೆ ಅನ್ನೋದು ನಮ್ಮ ದೇಶದಲ್ಲಿ ಇಲ್ಲ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ. ನಾವು ಮಾಡಿರಬಹುದು ಅಂತಾ ಹೇಳಬಹುದು, ಮಾಡಿದ್ದಾರೆ ಅಂತ ಹೇಳಲು ಆಗಲ್ಲ ಎಂದು ಹೇಳಿದರು.
ನಂತರ ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡಿದ ಅವರು, 135 ಜನ ಕಾಂಗ್ರೆಸ್ಸಿಗರು ಇದ್ದಾರೆ, ಅವರು ಒಗ್ಗಟ್ಟಿದ್ದರೆ ಯಾರು ಬೀಳಿಸಲು ಆಗುತ್ತೆ. ಡಿಕೆಶಿ ಬೆಳಗಾವಿಗೆ ಬಂದಾಗ ಹೋಗಬೇಡಿ ಅಂತ ನಾವು ಸತೀಶ್ ಜಾರಕಿಹೊಳಿಗೆ ಹೇಳಿ ಕೊಟ್ಟಿದ್ದೇವಾ?. ಅದು ಅವರು ತೆಗೆದುಕೊಂಡಿರುವ ತೀರ್ಮಾನ, 20 ಹಿರಿಯ ಶಾಸಕರು ಪತ್ರ ಬರೆದಿದ್ದರು, ನಾವೇನಾದರು ಬರೆಯಿರಿ ಅಂತ ಬರೆಸಿದ್ದೇವಾ? ಎಂದು ಪ್ರಶ್ನಿಸಿದರು.
ರಾಜಣ್ಣ ಅವರ ಬಳಿ ಐವರು ಡಿಸಿಎಂ ಮಾಡಿ ಅಂತ ನಾವು ಹೇಳಿ ಮಾಡಿಸಿಲ್ಲ. 135 ಜನ ಒಟ್ಟಿಗೆ ಇದ್ರೆ ಯಾರು ಅಲ್ಲಾಡಿಸಲು ಅಗುವುದಿಲ್ಲ. ಅವ್ರು ಅಲ್ಲಾಡ್ತಾ ಇದ್ರೆ ಅದು ನಮ್ಮ ಕೈಯ್ಯಲ್ಲಿ ಇಲ್ಲ. ಅಲ್ಲಾಡ್ತಾ ಇದ್ರೆ ಇವತ್ತಲ್ಲ ನಾಳೆ ಬಿದ್ದೇ ಬೀಳುತ್ತದೆ, ನಮ್ಮ ಕೈಯಲ್ಲಿದೆಯಾ. ಜನ ಒಳ್ಳೆಯ ಆಡಳಿತ ಕೊಡಿ ಅಂತ ಅಧಿಕಾರ ಕೊಟ್ಟಿದ್ದಾರೆ. ಕಲಾವಿದರ ಬಳಿಯೂ ದುಡ್ಡು ಎತ್ಕೊಂಡು ತಿನ್ನಿ ಅಂತ ಅಧಿಕಾರ ಕೊಟ್ಟಿದ್ದಾರಾ?, ಎಲ್ಲದರಲ್ಲೂ ಹೆದರಿಸಿ-ಬೆದರಿಸಿ ವಸೂಲಿ ಮಾಡಿ ಅಂತ ಅಧಿಕಾರ ಕೊಟ್ಟಿರೋದಾ?, ನಾವು ಹೆಚ್ಚು ಅಂದ್ರೆ ಇವರ ಮೇಲೆ ಆರೋಪ ಮಾಡಬಹುದು. ಸರ್ಕಾರಕ್ಕೆ ಜನ ಶಾಪ ಹಾಕಬಹುದು, ಅದಕ್ಕಿಂತ ಇನ್ನೇನೂ ಮಾಡೋಕಾಗುತ್ತದೆ ಎಂದರು.
ಸರ್ಕಾರವನ್ನು ಬೀಳಿಸುವ ತಾಕತ್ತು ಹೊರಗಡೆ ಯಾರಿಗೂ ಇಲ್ಲ. ಬೀಳಿಸುವ ಸಾಮರ್ಥ್ಯ ಇರೋದು ಒಳಗಡೆ ಇರುವ ಕಾಂಗ್ರೆಸ್ಸಿಗರಿಗೆ ಮಾತ್ರ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಹೇಳಿದರು.
ಇದನ್ನೂ ಓದಿ : ಅವರು ಹೇಳಿದ ಮಾತುಗಳೇ ಅವರಿಗೆ ತಿರುಗುಬಾಣವಾಗುತ್ತವೆ : ಡಿಕೆಶಿ ವಿರುದ್ಧ ಸಿ ಟಿ ರವಿ ವಾಗ್ದಾಳಿ