ಚಿಕ್ಕಮಗಳೂರು: 2017ರಲ್ಲಿಯೇ ಚಿಲುಮೆ ಸಂಸ್ಥೆಗೆ ಅವಕಾಶ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಆ ವೇಳೆ, ಆಡಳಿತ ನಡೆಸುತ್ತಿದ್ದದ್ದು ಕಾಂಗ್ರೆಸ್, ಬಿಜೆಪಿ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2017ರಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದ್ದು, ಮುಖ್ಯಮಂತ್ರಿಯಾಗಿದ್ದು ಸಿದ್ದರಾಮಯ್ಯ. ಆಗ ಅವಕಾಶ ಕೊಟ್ಟಿದ್ದು ಸರಿ, ಈಗ ತಪ್ಪು ಅಂತಾ ಅವರು ಹೇಳಕ್ಕಾಗಲ್ಲ. ಸದ್ಯ ತನಿಖೆ ನಡೆಯುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದರು.
ಈಗ ಕರಡು ಮತದಾರರ ಪಟ್ಟಿಯನ್ನು ಚುನಾವಣೆ ಆಯೋಗ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ಸಮಗ್ರ ತನಿಖೆ ಆಗುವವರೆಗೂ ನಾನು ಯಾರ ಮೇಲೆಯೂ ನಿರ್ದಿಷ್ಟವಾಗಿ ಆರೋಪ ಮಾಡುವುದಿಲ್ಲ ಎಂದರು.
ಇದನ್ನೂ ಓದಿ: ಸರ್ಕಾರದಿಂದ ಮತದಾರರ ಮಾಹಿತಿಗೆ ಕನ್ನ ಆರೋಪ.. ಚುನಾವಣಾ ಆಯೋಗ ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್ ನಾಯಕರು