ಚಿಕ್ಕಮಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಹರಿದಾಡುತ್ತಿರುವ ಸುದ್ದಿ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕನ್ನಡದಲ್ಲಿ ಒಂದು ಗಾದೆ ಮಾತಿಗೆ ಕಳ್ಳನ ಹೆಂಡತಿ ಯಾವತ್ತಿದ್ರು _ ಎಂದು ಕಿಡಿಕಾರಿದರು.
ಸಿಎಂ ಬದಲಾವಣೆ ಅನ್ನೋದು ಒಂದು ಸುಳ್ಳು ಸುದ್ದಿ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವರದಿ ಕೊಟ್ರು ಅನ್ನೋದು ಸಹ ಸುಳ್ಳು ಸುದ್ದಿ. ಈ ರೀತಿ ವದಂತಿ ಹರಡುವವರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ, ಇದರ ಹಿಂದೆ ಯಾರೋ ಷಡ್ಯಂತ್ರ ನಡೆಸುತ್ತಿರುವಂತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸುದ್ದಿ ಜೀವಂತವಾಗಿರುವಂತೆ ಮಾಡಲಾಗುತ್ತಿದೆ. ಕೆಲಸ ಇಲ್ದೆ ಇರೋರು ಇಂತದ್ದೆಲ್ಲಾ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸುವವರೇ ಈ ವದಂತಿ ಹರಡುತ್ತಿದ್ದಾರೆ. ಸಿಎಂಗೆ ನಾವೆಲ್ಲ ಸಲಹೆ ನೀಡಬಹುದು. ನಾವು ಸಲಹೆ ಕೊಡಬಹುದಾದ ಜಾಗದಲ್ಲಿ ಸಲಹೆ ಕೊಡುತ್ತೇವೆ ಎಂದು ಸಿ ಟಿ ರವಿ ಹೇಳಿದ್ರು.
ಓದಿ: ಮೊಸರಲ್ಲಿ ಕಲ್ಲು ಹುಡುಕುವ ಕಾಂಗ್ರೆಸ್ಸಿಗರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ : ಸಚಿವ ಆರ್. ಅಶೋಕ್