ಚಿಕ್ಕಮಗಳೂರು: ಕಾಂಗ್ರೆಸ್ನವರು 2018ರ ಚುನಾವಣೆಯಲ್ಲಿ ಜನತದಳವನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದರು. ಆದರೆ, ಕಾಂಗ್ರಸ್, ಜೆಡಿಎಸ್ ನವರು ಒಟ್ಟಿಗೆ ಸೇರಿಕೊಂಡರು. ಪಾರ್ಲಿಮೆಂಟ್ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಒಟ್ಟಗೆ ಸೇರಿ ಎಲೆಕ್ಷನ್ ಮಾಡಿದರು, ಯಾರು ಯಾವಾಗ ಹೇಗೆ ಆಡುತ್ತಾರೆ ಎಂದು ಹೇಳೋಕೆ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೊಟ್ಟಂತಹ ಮೆಜಾರಿಟಿಯನ್ನು ಕರ್ನಾಟಕದಲ್ಲಿ ಕೊಡಿ. ಸಣ್ಣ, ಪುಟ್ಟ ದೋಷಗಳು ದೂರು ಆಗುತ್ತೆ. ನಮಗೆ 2008 ರಲ್ಲೂ ಕ್ಲಿಯರ್ ಮೆಜಾರಿಟಿ ಬರಲಿಲ್ಲ, ಹಾಗಾಗಿ ಅವರನ್ನು ಸೇರಿಸಿಕೊಂಡು ಸರ್ಕಾರ ರಚಿಸಬೇಕಾಯಿತು. 2018 ರಲ್ಲೂ ಹೀಗೆ ಹಾಗಿತ್ತು. ಹಾಗಾಗಿ ಇಂತಹ ಪರಿಸ್ಥಿತಿ ಮತ್ತೆ ಬರಬಾರದು ಎಂದರೆ ರಾಜ್ಯದ ಜನ ಸ್ಪಷ್ಟ ಬಹುಮತವನ್ನು ನೀಡಬೇಕು ಎಂದರು. ಒಂದೇ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಿಸ ಬರಾದು. ಆಗ ರಾಜಕಾರಣ ಸ್ವಚ್ಛವಾಗುತ್ತೆ, ರಾಷ್ಟ್ರಭಕ್ತಿ ರಾಜಕಾರಣ ಬರುತ್ತೆ. ಕಾಂಗ್ರೆಸ್ನ್ನು ತೊಳೆದು ಅರಬ್ಬಿ ಸಮುದ್ರಕ್ಕೆ ಹಾಕಿ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಜೆಸಿಬಿ ಹಿಡಿದು ಲೂಟಿ ಹೊಡೆಯಲು ಕಾದು ಕೂತಿದ್ದಾರೆ: ನಾನು ಕೊಟ್ಟ ಅಕ್ಕಿಯನ್ನ ಕಡಿಮೆ ಮಾಡಿದರು, ಅವರ ಮನೆ ಹಾಳಾಗ್ ಹೋಗ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಕಾಂಗ್ರೆಸ್ ನವರು ಜೆಸಿಬಿ ಹಿಡಿದು ಲೂಟಿ ಹೊಡೆಯಲು ಕಾದು ಕೂತಿದ್ದಾರೆ. ರಾಜಸ್ಥಾನ್, ಹಿಮಾಚಲ ಪ್ರದೇಶ, ಛತ್ತೀಸ್ ಗಢದಲ್ಲಿ ಅಧಿಕಾರದಲ್ಲಿದ್ದಾರೆ. ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂತು, ಅಧಿಕಾರಕ್ಕೆ ಬಂದ ಮೂರೇ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ 3-4 ರೂಪಾಯಿ ಜಾಸ್ತಿ ಮಾಡಿದರು. ನಿಜವಾಗಲೂ ಕಾಂಗ್ರೆಸ್ನ ನೀತಿಯಾಗಿದ್ದರೆ ಅವರು ಅಧಿಕಾರದಲ್ಲಿರುವ ರಾಜ್ಯದಲ್ಲಿ ಮೊದಲು ಕೊಟ್ಟು ತೋರಿಸಲಿ ಎಂದು ಸಾವಲು ಹಾಕಿದರು.
ನಾವು ಕೊಟ್ಟು ಮಾತನಾಡುತ್ತೇವೆ, ಇವರು ಕೊಡದೆ ಮಾತನಾಡುತ್ತಾರೆ: ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದನ್ನು ಹೇಳುತ್ತಾರೆ, ಅವರು ಚುನಾವಣೆಗೂ ಮುಂಚೆ ಜನ್ ಧನ್, ಸ್ವಚ್ಛ ಭಾರತ ಶೌಚಾಲಯ, ಗ್ಯಾಸ್ ಸಂಪರ್ಕ, ಕೊಡುತ್ತೀನಿ ಎಂದು ಹೇಳಿಲ್ಲ. ಆದ್ರೆ ಕೊಟ್ಟು ತೋರಿಸಿದರು ಮತ್ತು ಅವರು ಕೊಟ್ಟು ಮಾತನಾಡಿದರು. ಇವರು ಕೊಡದೆ ಮಾತನಾಡಿದರು. ಕಾಂಗ್ರೆಸ್ಗೂ ಬಿಜೆಪಿಗೂ ಇರುವ ವ್ಯತ್ಯಾಸವೇನೆಂದರೆ ನಾವು ಕೊಟ್ಟು ಮಾತನಾಡುತ್ತೆವೆ, ಇವರು ಕೊಡದೆ ಮಾತನಾಡುತ್ತಾರೆ ಎಂದು ಸಿ ಟಿ ರವಿ ಟೀಕಿಸಿದರು.
ರಿಡ್ಯೂ ಅಂದರೆ ಏನು ಎಂದು ಸ್ವಲ್ಪ ಬಿಡಿಸಿ ಹೇಳಿ: ಅವ್ಯವಹಾರ ನಡೆದಿದ್ದರೆ ರಾಜಕೀಯ ನಿವೃತ್ತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಡ್ಯೂ ಅಂದರೆ ಏನು ಎಂದು ಸ್ವಲ್ಪ ಬಿಡಿಸಿ ಹೇಳಿ. ಡಿನೋಟಿಫಿಕೇಷನ್ ಮಾಡಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು, ಡಿನೋಟಿಫೈ ಮಾಡಿ ಖಾಸಗಿಯವರಿಗೆ ಹಂಚಿದ್ದು ಹಗರಣ ಅಲ್ಲದೆ ಇನ್ನೇನು ಹೇಳಬೇಕು? ಅದು ಹಗರಣ ಅಲ್ಲದಿದ್ದರೆ ಇನ್ಯಾವುದು ಹಗರಣ ಆಗುತ್ತೆ. ನಿಮ್ಮದೇ ಒಬ್ಬ ಮಂತ್ರಿ ಹಾಸಿಗೆ, ದಿಂಬು ವಿಷಯದಲ್ಲಿ ಹಣ ತಿಂದು ಕೇಸ್ ದಾಖಲಾಗಿದ್ದು, ಮರೆತು ಹೋಯಿತಾ ನಿಮಗೆ, ಈ ಸ್ಯಾಂಡ್ ಸ್ಕ್ಯಾಮ್ನಲ್ಲಿ ಯಾರು ಭಾಗಿಯಾಗಿದ್ದರು ಎಂದು ಬಿಡಿಸಿ ಹೇಳಬೇಕಾ ನಾನು, ನಿಮ್ಮ ಎಡಗೈ ಬಲಗೈಗಳೇ ತರ ಇದ್ದವರೇ ಭಾಗಿಯಾಗಿದ್ದು ಎಂದು ಆರೋಪಿಸಿದರು.
ಇದನ್ನೂ ಓದಿ:ಬೆಂಗಳೂರಿನ 300ಕ್ಕೂ ಹೆಚ್ಚು ಜಾಗಗಳಲ್ಲಿ ನಾಳೆ ಕಾಂಗ್ರೆಸ್ನಿಂದ ಪ್ರತಿಭಟನೆ : ಶಾಸಕ ಎನ್ ಎ ಹ್ಯಾರಿಸ್