ಚಿಕ್ಕಮಗಳೂರು: ದತ್ತ ಮಾಲಾ ಉತ್ಸವ ಹಿನ್ನೆಲೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಇತರೆ ಭಕ್ತಾಧಿಗಳು ನಗರದ ನಾರಾಯಣಪುರ ಬಡಾವಣೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿದರು.
ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆಗಳು ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಉತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಉತ್ಸವ ಹಿನ್ನೆಲೆ, ನಗರದ ನಾರಯಣಪುರ ಬಡಾವಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಭಕ್ತಾಧಿಗಳು 10ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿದರು. ದತ್ತಾತ್ರೇಯ ಸ್ವಾಮಿಗೆ ಅಕ್ಕಿ, ಬೆಲ್ಲ, ಮತ್ತು ಕಾಯಿ ತುಂಬಾ ಪ್ರಿಯವಾದ ಆಹಾರವಾಗಿರುವುದರಿಂದ ಮನೆ ಮನೆಗೆ ತೆರಳಿ ಭಿಕ್ಷೆಯನ್ನು ಬೇಡುವ ಮೂಲಕ ಪಡಿಯನ್ನು ಸಂಗ್ರಹಿಸಿದರು.
ಇದನ್ನೂ ಓದಿ: ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ.. ಅನುಸೂಯ ಜಯಂತಿ ಆಚರಿಸಿದ ಮಹಿಳಾ ಭಕ್ತಾದಿಗಳು
ಮನೆ ಮನೆಗೆ ತೆರಳಿ ಸಂಗ್ರಹಿಸಿದ ಅಕ್ಕಿ, ಬೆಲ್ಲ, ಕಾಯಿಯ ಪಡಿಯನ್ನು ನಾಳೆ ದತ್ತಪೀಠದಲ್ಲಿ ಅಥವಾ ಚಂದ್ರದ್ರೋಣ ಪರ್ವತದಲ್ಲಿರುವ ಸೀತಾಳಯ್ಯನ ಗಿರಿ, ಫಲಹಾರ ಮಠ, ನಿರ್ವಾಹಣ ಸ್ವಾಮಿ ಸೇರಿದಂತೆ ಯಾವುದಾದರೂ ಒಂದು ಮಠದಲ್ಲಿ ಪಡಿಯನ್ನು ಸಲ್ಲಿಸಲಾಗುವುದು.
ಇಂದು ಸಂಜೆ ನಾಲ್ಕು ಗಂಟೆಗೆ ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳದಿಂದ ನಗರದಲ್ಲಿ ಬೃಹತ್ ಶೋಭಯಾತ್ರೆ ಜರುಗಲಿದೆ.