ETV Bharat / state

ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದ ಬೈಕ್​: ಸಿಆರ್​ಪಿಎಫ್​ ಯೋಧ ಸಾವು

author img

By

Published : Dec 18, 2019, 11:49 PM IST

ನಿನ್ನೆ ರಾತ್ರಿ ಸಖರಾಯ ಪಟ್ಟಣಕ್ಕೆ ಹೋಗಿ ಬರುವ ವೇಳೆ ತಡರಾತ್ರಿ ರಸ್ತೆ ಸರಿಯಾಗಿ ಕಾಣದೇ ರಸ್ತೆ ಪಕ್ಕದಲ್ಲಿರುವ ಸೇತುವೆಗೆ ಬೈಕ್ ಡಿಕ್ಕಿಯಾಗಿ ಸೇತುವೆ ಮೇಲಿಂದಾ ಬಿದ್ದು ಯೋಧ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

CRPF soldier dies
ಸಿಆರ್​ಪಿಎಫ್​ ಯೋಧ ಸಾವು

ಚಿಕ್ಕಮಗಳೂರು: ಮಂಗಳವಾರ ರಾತ್ರಿ ಬೈಕ್​ನಲ್ಲಿ ಮನೆಗೆ ಹೋಗುವಾಗ ಬೈಕ್​ನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದು ಯೋಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೈಕ್​ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದು ಸಿಆರ್​ಪಿಎಫ್​ ಯೋಧ ಸಾವು

ಸಿಆರ್​ಪಿಎಫ್​ ಯೋಧ ಚಿದಾನಂದ್ (27) ಮೃತರು. ಕಡೂರು ತಾಲೂಕಿನ ಸಖರಾಯಪಟ್ಟಣದ ಹೊರ ವಲಯದಲ್ಲಿರುವ 173 ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಸಖರಾಯಪಟ್ಟಣದ ಬಾಳೇನಹಳ್ಳಿ ನಿವಾಸಿಯಾಗಿದ್ದಾರೆ.

ಮಂಗಳವಾರ ರಾತ್ರಿ ಸಖರಾಯ ಪಟ್ಟಣಕ್ಕೆ ಹೋಗಿ ಬರುವ ವೇಳೆ ತಡರಾತ್ರಿ ರಸ್ತೆ ಸರಿಯಾಗಿ ಕಾಣದೇ ರಸ್ತೆ ಪಕ್ಕದಲ್ಲಿರುವ ಸೇತುವೆಗೆ ಬೈಕ್ ಡಿಕ್ಕಿಯಾಗಿ ಸೇತುವೆ ಮೇಲಿಂದ ಬಿದ್ದು ಯೋಧ ಮೃತಪಟ್ಟಿದ್ದಾರೆ. ಈ ಘಟನೆ ಯಾರಿಗೂ ತಿಳಿದಿರಲಿಲ್ಲ. ಆದರೇ ಚಿದಾನಂದ್ ಮನೆಯವರು ಅವರ ಮೊಬೈಲ್​ಗೆ ಕರೆ ಮಾಡುತ್ತಲೇ ಇದ್ದರೂ ಫೋನ್ ರಿಂಗ್ ಆಗುತ್ತಿತ್ತು. ಆದರೇ ಫೋನ್ ಸ್ವೀಕರಿಸುತ್ತಿರಲಿಲ್ಲ. ಸಖರಾಯ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧನಾಗಿ ಸಿಆರ್​ಪಿಎಫ್​ ನಲ್ಲಿ ಚಿದಾನಂದ್ ಕಾರ್ಯ ನಿರ್ವಹಿಸುತ್ತಿದ್ದು, ರಜೆ ಕಳೆಯಲು ಊರಿಗೆ ಬಂದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸದ್ಯ ಮೃತ ದೇಹವನ್ನು ಚಿಕ್ಕಮಗಳೂರಿನ ಜಿಲ್ಲಾಸ್ವತ್ರೆಗೆ ರವಾನಿಸಲಾಗಿದೆ. ಸಖರಾಯ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Kn_Ckm_05_Accident_death_av_7202347Body:ಚಿಕ್ಕಮಗಳೂರು :-

ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುವ ವೇಳೆ ಯೋಧನ ಅಜಾಗಾರುಕತೆಯಿಂದಾ ಬೈಕ್ ನ ನಿಯಂತ್ರಣ ತಪ್ಪಿ ಸೇತುವೆ ಕೆಳಗ್ಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಹೊರ ವಲಯದಲ್ಲಿರುವ 173 ರಾಷ್ಟ್ರೀಯ ಹೆದ್ದಾರಿಯಲ್ಲಿ ಯೋಧ ಚಿದಾನಂದ್ (27) ಸಿ ಆರ್ ಪಿ ಎಫ್ ಯೋಧ ಮೃತ ಪಟ್ಟ ವ್ಯಕ್ತಿ ಯಾಗಿದ್ದು ಸಖರಾಯಪಟ್ಟಣದ ಬಾಳೆನಹಳ್ಳಿ ನಿವಾಸಿಯಾಗಿದ್ದಾರೆ. ನಿನ್ನೆ ರಾತ್ರಿ ಸಖರಾಯ ಪಟ್ಟಣಕ್ಕೆ ಹೋಗಿ ಬರುವ ವೇಳೆ ತಡರಾತ್ರಿ ರಸ್ತೆ ಸರಿಯಾಗಿ ಕಾಣದೇ ಅಜಾಗರುತೆಯಿಂದಾ ರಸ್ತೆ ಪಕ್ಕದಲ್ಲಿರುವ ಸೇತುವೆಗೆ ಬೈಕ್ ಡಿಕ್ಕಿಯಾಗಿ ಸೇತುವೆ ಮೇಲಿಂದಾ ಬಿದ್ದು ಮೃತ ಪಟ್ಟಿದ್ದು ಈ ಘಟನೆ ಯಾರಿಗೂ ತಿಳಿದಿರಲಿಲ್ಲ.ಆದರೇ ಚಿದಾನಂದ್ ಮನೆಯವರು ನಿನ್ನೆ ರಾತ್ರಿಯಿಂದಾ ಅವರ ಮೊಬೈಲ್ ಗೆ ಕರೆ ಮಾಡುತ್ತಲೇ ಇದ್ದರು.ಪೋನ್ ರಿಂಗ್ ಆಗುತ್ತಿತ್ತು ಆದರೇ ಪೋನ್ ತೆಗೆಯುತ್ತಿರಲಿಲ್ಲ.ಆದರೇ ಈ ಘಟನೆ ಇಂದೂ ಸಂಜೆ ಬೆಳೆಕಿಗೆ ಬಂದಿದ್ದು ಸಖರಾಯ ಪಟ್ಟಣ ಪೋಲಿಸರು ಸ್ಥಳಕ್ಕೇ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧನಾಗಿ ಸಿ ಆರ್ ಪಿ ಎಫ್ ನಲ್ಲಿ ಚಿದಾನಂದ್ ಕಾರ್ಯ ನಿರ್ವಹಿಸುತ್ತಿದ್ದು ತನ್ನ ರಜೆಯನ್ನು ಕಳೆಯಲು ಊರಿಗೆ ಬಂದ ವೇಳೆ ಈ ಘಟನೆ ನಡೆದಿದ್ದು ಸದ್ಯ ಮೃತ ದೇಹವನ್ನು ಚಿಕ್ಕಮಗಳೂರಿನ ಜಿಲ್ಲಾಸ್ವತ್ರೆಗೆ ರವಾನೆ ಮಾಡಲಾಗಿದೆ. ಸಖರಾಯ ಪಟ್ಟಣ ಪೋಲಿಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.