ETV Bharat / state

ಚಿಕ್ಕಮಗಳೂರು.. ತಪಸ್ವಿ ಸೃಷ್ಟಿಸಿದ 1000 ಬಿಲ್ವಪತ್ರೆಯ ವನ

author img

By

Published : Mar 1, 2022, 9:08 PM IST

ಶಿವ ಪೂಜೆಗಾಗಿ ಬಂದ ಮರುಳಸಿದ್ದೇಶ್ವರ ಎಂಬ ತಪಸ್ವಿ ಶಿವ ಪೂಜೆಗಾಗಿ ಬಿಲ್ವಪತ್ರೆ ವನವನ್ನು ಮಾಡಿದರು. ಇದು ಶಿವನ ಕೃಪೆಯಿಂದ ಇದೆ ಎಂದು ಊರಿನವರ ನಂಬಿಕೆ.

Created by asceticism 1000 bilva patre forest in chikkamalore
ಕಲ್ಲು ಮುರುಡೇಶ್ವರ ದೇವಸ್ಥಾನ

ಚಿಕ್ಕಮಗಳೂರು: ಸುಮಾರು ಎರಡು ಎಕರೆ ಪ್ರದೇಶದಲ್ಲಿ 1000ಕ್ಕೂ ಅಧಿಕ ಹೆಚ್ಚು ಬಿಲ್ವಪತ್ರೆ ಮರಗಳಿವೆ. ಈ ಮರದ ಎಲೆಯನ್ನು ಶಿವನ ಮೇಲೆ ಹಾಕಿದರೆ ನಮ್ಮ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಅಡಗಿದೆ. ದಕ್ಷಿಣ ಭಾರತದಲ್ಲಿ ಇಂತಹ ಬಿಲ್ವಪತ್ರೆ ವನ ಎಲ್ಲಿಯೂ ಇಲ್ಲ. ಅಲ್ಲದೆ ಒಂದೇ ಕಡೆ ಇಷ್ಟು ವಿಸ್ತೀರ್ಣವಾಗಿ ಬಿಲ್ವಪತ್ರೆ ಮರಗಳು ಚಾಚಿಕೊಂಡಿರುವುದು ಸಖರಾಯಪಟ್ಟಣದಲ್ಲಿ ಕಾಣಬಹದಾಗಿದೆ.

ತಪಸ್ವಿ ಸೃಷ್ಟಿಸಿದ 1000 ಬಿಲ್ವಪತ್ರೆಯ ವನ..

ಇಲ್ಲಿನ ಬಿಲ್ವ ಪತ್ರೆಯ ವನಕ್ಕೆ ಅದರದೇ ಆದ ಐತಿಹ್ಯವಿದೆ. ಶಿವ ಪೂಜೆಗಾಗಿ ಬಂದ ಮರುಳಸಿದ್ದೇಶ್ವರ ಎಂಬ ತಪಸ್ವಿ ಶಿವ ಪೂಜೆಗಾಗಿ ಸೃಷ್ಟಿಸಿದ ವನ ಇದು ಎಂದು ನಂಬಲಾಗಿದೆ.

ಬಿಲ್ವಪತ್ರೆ ವನ ರಾಶಿಗೆ ಹೊಂದಿಕೊಂಡಂತೆ ಕಲ್ಲು ಮುರುಡೇಶ್ವರ ದೇವಸ್ಥಾನವು ಇದೆ. ಮರುಳಸಿದ್ದೇಶ್ವರ ತಪಸ್ವಿ ಪೂಜೆ ಮಾಡಿದ ದೇವಸ್ಥಾನ ಇದು. ಕಲ್ಲು ಮುರುಡೇಶ್ವರ ದೇವಸ್ಥಾನ ಶಿವನನ್ನು ಪೂಜೆ ಮಾಡಲು ಈ ಬಿಲ್ವಪತ್ರೆಯ ಎಲೆಗಳನ್ನು ಮರಳುಸಿದ್ದೇಶ್ವರ ಎಂಬ ತಪಸ್ವಿ ಬಳಸುತ್ತಿದ್ದರಂತೆ ಆ ತಪಸ್ವಿ ಇಲ್ಲಿಯೇ ಐಕ್ಯರಾಗಿದ್ದಾರೆ.

ಕಲ್ಲು ಮುರುಡೇಶ್ವರ ಸ್ವಾಮಿಗೆ ಬಿಲ್ವಪತ್ರೆ ಎಲೆಗಳನ್ನು ಅರ್ಪಿಸಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಬಿಲ್ವಪತ್ರೆ ವನ ತಪಸ್ಸಿನಿಂದ ಬೆಳೆದಿದ್ದು ಎಂಬ ನಂಬಿಕೆ ಸ್ಥಳೀಯರಲ್ಲಿ ಇದ್ದು, ಸಕಲ ಇಷ್ಟಾರ್ಥಗಳನ್ನು ಕಲ್ಲು ಮುರುಡೇಶ್ವರ ಸ್ವಾಮಿ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಪಾರ್ಥಿವ ಶರೀರದ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ: ನವೀನ್​ ತಂದೆಗೆ ಸಿಎಂ ಭರವಸೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.