ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಆಶ್ರಮದ ವತಿಯಿಂದ ಗ್ರಾಮೀಣ ಭಾಗದಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ. ಆ್ಯಂಬುಲೆನ್ಸ್ ಸೇವೆಯನ್ನೂ ಆರಂಭ ಮಾಡಲಾಗಿದೆ. ಬಾಳೆಹೊನ್ನೂರು ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಕೊಡುಗೆ ನೀಡಿರುವ ಗುರೂಜಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಯಪುರ ಠಾಣಾ ಸಿಬ್ಬಂದಿಗೆ ಮೆಡಿಕಲ್ ಕಿಟ್‌ನ ವಿನಯ್ ಗುರೂಜಿ ವಿತರಣೆ ಮಾಡಿದ್ದಾರೆ. ಬಾಳೆಹೊನ್ನೂರು ಆಸ್ಪತ್ರೆಯನ್ನು ಆಶ್ರಮದ ವತಿಯಿಂದ ಸ್ಯಾನಿಟೈಸ್ ಕೂಡ ಮಾಡಿಸಿದ್ದಾರೆ. ಅಲ್ಲದೇ, ಕೂಲಿ ಕಾರ್ಮಿಕರ ಮನೆಗಳಿಗೆ ತೆರಳಿ ರೇಷನ್ ಕಿಟ್ ಹಂಚುವ ಕೆಲಸವನ್ನು ಗುರೂಜಿ ಮಾಡಿದ್ದಾರೆ.
ಓದಿ: ಲಾಕ್ಡೌನ್ ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಜಿಲ್ಲಾ ಪ್ರವಾಸಕ್ಕೆ ತೆರಳಿದ ಸಿಎಂ ಬಿಎಸ್ವೈ