ETV Bharat / state

ಕೊರೊನಾ ಎಫೆಕ್ಟ್​ನಿಂದ ದೇವಾಲಯಗಳ ಆದಾಯವೂ ಕುಸಿತ ..! - ಚಿಕ್ಕಮಗಳೂರು ದೇವಾಲಯ ಸುದ್ದಿ

ಕೊರೊನಾದಿಂದ ದೇವಾಲಯಗಳ ಆದಾಯ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ನೆರವಿಗೆ ಬರಬೇಕೆಂದು ಹಿರೇಮಗಳೂರು ಕಣ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇವಾಲಯಗಳ ಆದಾಯದ ಮೇಲೆ ಕೊರೊನಾ ಪರಿಣಾಮ
ದೇವಾಲಯಗಳ ಆದಾಯದ ಮೇಲೆ ಕೊರೊನಾ ಪರಿಣಾಮ
author img

By

Published : Oct 26, 2020, 5:35 PM IST

ಚಿಕ್ಕಮಗಳೂರು: ಕಳೆದ ಆರು ತಿಂಗಳಿನಿಂದ ಕೊರೊನಾ ವೈರಸ್ ಬಿಟ್ಟೂ ಬಿಡದೇ ಜನರನ್ನು ಕಾಡುತ್ತಿದೆ. ಈ ವೈರಸ್​ನ ಹಾವಳಿ ಎಲ್ಲಾ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಈ ವೈರಸ್ ದೇವಾಲಯದ ಮೇಲೂ ತನ್ನ ಪ್ರಭಾವ ಬೀರಿದ್ದು, ದೇವಾಲಯಗಳಿಗೆ ಆದಾಯ ತಂದು ಕೊಡುತ್ತಿದ್ದ ವಾಣಿಜ್ಯ ಮಳಿಗೆಗಳು, ಸಭಾಭವನ, ಕಲ್ಯಾಣ ಮಂಟಪ, ಹೂ ಅಂಗಡಿಗಳು ಸೇರಿದಂತೆ ಎಲ್ಲವೂ ನಷ್ಟದಲ್ಲಿವೆ. ಇದರಿಂದ ದೇವಸ್ಥಾನಕ್ಕೂ ಆದಾಯ ಬರದೇ ಶೋಚನೀಯ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ...

ಕಳೆದ ಆರು ತಿಂಗಳಿನಿಂದ ಈ ಕೊರೊನಾ ವೈರಸ್ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿ ಮಾಡಿ ಜನರ ನೆಮ್ಮದಿ ಹಾಳು ಮಾಡಿದೆ. ಇದರ ಪ್ರಭಾವ ದೇವಸ್ಥಾನ, ಮಠ, ಮಂದಿರಗಳ ಮೇಲೂ ಬೀರಿದ್ದು, ಇವುಗಳಿಗೆ ಪ್ರಮುಖ ಆದಾಯದ ಮೂಲವಾಗಿದ್ದ ವಾಣಿಜ್ಯ ಮಳಿಗೆಗಳು, ಅಂಗಡಿಗಳು ಬಾಗಿಲು ಮುಚ್ಚಿ ಬಾಡಿಗೆ ನೀಡದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ದೇವಸ್ಥಾನ ನಿರ್ವಹಣೆಗೆ ಧನವಿಲ್ಲ.

ಈ ಮಧ್ಯೆ ಕೆಲವು ದೇವಸ್ಥಾನಗಳಿಗೆ ಮಳಿಗೆಗಳು, ಸಮುದಾಯ ಭವನಗಳಿವೆ. ಇವುಗಳಿಂದ ಬಾಡಿಗೆ ಬರುತ್ತಿತ್ತು. ಇದರಿಂದ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು, ರಥೋತ್ಸವ, ವಿಶೇಷ ಹಬ್ಬಗಳು, ಹೋಮ ಇತರೆ ಕಾರ್ಯಕ್ರಮಗಳು ನಡೆಯುತ್ತಿತ್ತು. ಇದರಿಂದ ದೇವಸ್ಥಾನದ ಖರ್ಚಿಗೆ ಹಣವೂ ಸಿಗುತ್ತಿತ್ತು. ಈಗ ಮದುವೆ ಕಾರ್ಯಗಳು, ಧಾರ್ಮಿಕ ಕಾರ್ಯಗಳು, ಪೂಜೆಗಳು ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳ ಸ್ಥಿತಿ ಅಯೋಮಯವಾಗಿದೆ.

ಇನ್ನು ಜನರು ದೇವಾಲಯಕ್ಕೆ ಬರಬೇಕಾದರೆ ಅನುಮತಿ ಪಡೆಯಬೇಕಾಗಿದೆ. ಅಷ್ಟೇ ಅಲ್ಲದೆ, ದೇವಾಲಯಕ್ಕೆ ಆಗಮಿಸಲು ಪ್ರೇರೇಪಣೆ ನೀಡಬೇಕು. ದೇವಾಲಯಗಳ ರಕ್ಷಣೆಗೆ ಮುಂದಾಗುವಂತೆ ಸರ್ಕಾರ ಸೂಚಿಸಬೇಕು. ದೇವಾಲಯದ ನಿರ್ವಹಣೆಗಾಗಿ ಓರ್ವ ಗುಮಾಸ್ತನನ್ನು ನೇಮಕ ಮಾಡಬೇಕು. ಸ್ಥಳೀಯ ಮುಖಂಡರೂ ಸಹಕರಿಸುವಂತೆ ತಿಳಿಸಬೇಕು. ದೇವಾಲಯಕ್ಕೆ ಬರುವ ಭಕ್ತರ ಸುರಕ್ಷತೆಗೆ ಅನುಕೂಲವಾಗುವಂತಹ ಸೌಲಭ್ಯ ಕಲ್ಪಿಸಬೇಕು. ಅಗತ್ಯ ಸೇವೆಗಳನ್ನು ಮಾಡಿಸಲು ಭಕ್ತರಿಗೆ ಅವಕಾಶ ಮಾಡಿಕೊಡಬೇಕು. ದೇವಾಲಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ದೂರವಾಣಿ ಸಂಖ್ಯೆ ಅಥವಾ ಆನ್​ಲೈನ್ ವ್ಯವಸ್ಥೆ ಮಾಡಬೇಕಿದೆ ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ಸರಿಯಾದ ನಿರ್ವಹಣೆ ಹಾಗೂ ದೇವಾಲಯಗಳಿಗೆ ಆದಾಯವಿಲ್ಲದೇ ಸಮಸ್ಯೆ ಉಂಟಾಗಿದ್ದು, ಅವುಗಳನ್ನು ಸರಿದೂಗಲು ಸರ್ಕಾರ ನೆರವಿಗೆ ಬರಬೇಕಿದೆ ಎಂದು ಹಿರೇಮಗಳೂರು ಕಣ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.