ಚಿಕ್ಕಮಗಳೂರು: ಜಿಲ್ಲೆಯಲ್ಲಿ ನೆರೆ ಸಂತ್ರಸ್ತ ರೈತರಿಗೆ ಹಾಗೂ ಜನರಿಗೆ ಪರಿಹಾರ ಬಾರದ ಕಾರಣ ಕಳಸ ತಾಲೂಕಿನಲ್ಲಿ ಮನನೊಂದು ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ, ಸಾರ್ವಜನಿಕರು ಮೂಡಿಗೆರೆ ತಾಲೂಕಿನ ಕಳಸ ಬಂದ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಂಗಡಿ-ಮುಂಗಟ್ಟು ಬಂದ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಗದ್ದೆ ಗ್ರಾಮದಲ್ಲಿ ರೈತನೋರ್ವ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇನ್ನೋರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದು, ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆಯೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ನೆರೆ ಪರಿಹಾರ ವಿಳಂಬ: ಚಿಕ್ಕಮಗಳೂರಲ್ಲಿ ರೈತ ಆತ್ಮಹತ್ಯೆ
ಸಚಿವರು, ಶಾಸಕರು, ಸಿಎಂ ಭೇಟಿ ನಾಮಕಾವಸ್ತೆಗಷ್ಟೇ ಎಂಬಂತಾಗಿದ್ದು, ಕಳಸದ ಬಹುತೇಕ ಭಾಗ ಮಹಾ ಮಳೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಸರ್ಕಾರದ ಪರಿಹಾರ ಇನ್ನೂ ಮರಿಚಿಕೆ ಆಗಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.