ಚಿಕ್ಕಮಗಳೂರು: ವರ್ಷ ಕಳೆದರೂ ನಗರಸಭೆ ಚುನಾವಣೆಗೆ ಮುಂದಾಗದ ಕಾರಣ, ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಎದುರು ಕೇಕ್ ಕತ್ತರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆ ದುರಸ್ತಿ, ಡಾಂಬರೀಕರಣ ಹಾಗೂ ನಗರೋತ್ಥಾನ ಯೋಜನೆಯ ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇವರು ಚುನಾವಣೆ ಘೋಷಣೆ ನಂತರವಷ್ಟೇ ಕಾಮಗಾರಿ ಆರಂಭಿಸುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.