ETV Bharat / state

ಪಿಡಿಒ-ಗ್ರಾಮ ಪಂಚಾಯತ್ ಸದಸ್ಯನ ನಡುವೆ ಜಟಾಪಟಿ: ರಸ್ತೆ ತಡೆದು ಪ್ರತಿಭಟನೆ - ಪಂಚಾಯತ್​ ಅಭಿವೃದ್ಧಿ ಅಧಿಕಾರಿ

ಅನುದಾನ ಹಂಚಿಕೆ ವಿಚಾರವಾಗಿ ಗ್ರಾಮ ಪಂಚಾಯತ್​ ಸದಸ್ಯ ಮತ್ತು ಪಂಚಾಯತ್​ ಅಭಿವೃದ್ಧಿ ಅಧಿಕಾರಿಯ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡ ಘಟನೆ ಕಡೂರು ತಾಲೂಕಿನ ನಾಗನಹಳ್ಳಿಯಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

clash between pdo  and gam panchayat member
ಪಿಡಿಒ-ಗ್ರಾಮ ಪಂಚಾಯತ್ ಸದಸ್ಯನ ನಡುವೆ ಜಟಾಪಟಿ
author img

By

Published : Oct 30, 2022, 7:09 PM IST

ಚಿಕ್ಕಮಗಳೂರು : ಅನುದಾನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಿಡಿಒ ಮತ್ತು ಗ್ರಾಮ ಪಂಚಾಯತ್ ಸದಸ್ಯನ ಮಧ್ಯೆ ಜಟಾಪಟಿ ನಡೆದಿದ್ದು, ರಸ್ತೆ ತಡೆದು ಪ್ರತಿಭಟನೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಅನುದಾನ ಹಂಚಿಕೆ ವಿಚಾರವಾಗಿ ಗ್ರಾಮ ಪಂಚಾಯತ್​ ಸದಸ್ಯ ಮತ್ತು ಪಂಚಾಯತ್​ ಅಭಿವೃದ್ಧಿ ಅಧಿಕಾರಿ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡ ಘಟನೆ ಕಡೂರು ತಾಲೂಕಿನ ನಾಗನಹಳ್ಳಿಯಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಗ್ರಾಮ ಪಂಚಾಯತ್​ ಸದಸ್ಯ ವಸಂತ್ ಕುಮಾರ್ ಮತ್ತು ಪಿಡಿಒ ಪದ್ದಣ್ಣ ಗಾವಾಡಿಯ ನಡುವೆ ಚರಂಡಿ ಸ್ವಚ್ಛತೆ ವಿಚಾರವಾಗಿ ಆರಂಭವಾದ ಜಗಳ ಅನುದಾನ ಹಂಚಿಕೆ ವಿಷಯಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸಖರಾಯಪಟ್ಟಣ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಪಿಡಿಒ ತಲೆಮರೆಸಿಕೊಂಡಿದ್ದಾರೆ.

ರಸ್ತೆ ತಡೆ ನಡೆಸಿ ಪ್ರತಿಭಟನೆ

ಇದನ್ನೂ ಓದಿ: ಮೈಸೂರು: ಪಿಡಿಒ - ಗ್ರಾ.ಪಂ‌ ಸದಸ್ಯನ ನಡುವೆ ಬಿಗ್​ ಫೈಟ್!

ವಿಷಯ ತಿಳಿಯುತ್ತಿದ್ದಂತೆ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಖರಾಯಪಟ್ಟಣ ಠಾಣೆ ಎದುರು ರಸ್ತೆ ತಡೆ ನಡೆಸಿ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ಬಂಧಿಸುವಂತೆ ಒತ್ತಾಯಿಸಿದ್ದಾರೆ. ರಸ್ತೆ ತಡೆ ಹಿನ್ನೆಲೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.