ETV Bharat / state

ನೀರು ಹರಿಯುವ ಪ್ರದೇಶದಲ್ಲಿ ಕಾಮಗಾರಿ ಬೇಡ ಎಂದು ಗ್ರಾಮಸ್ಥರಿಂದ ಪ್ರತಿಭಟನೆ

ನೀರು ಹರಿಯುವ ಪ್ರದೇಶಗಳಲ್ಲಿ ಕಾಮಾಗಾರಿಗಳನ್ನು ನಡೆಸುವುದರಿಂದ ಮಳೆಗಾಲದಲ್ಲಿ ನೀರು ಹರಿಯಲು ಜಾಗವಿಲ್ಲದೆ ನದಿ ನೀರು ಗ್ರಾಮಕ್ಕೆ ನುಗ್ಗುತ್ತದೆ. ಆದ್ದರಿಂದ ನೀರು ಹರಿಯುವ ಪ್ರದೇಶಗಳಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸಬಾರದೆಂದು ಎಂದು ಚಿಕ್ಕಮಗಳೂರಿನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ
author img

By

Published : Aug 28, 2019, 10:09 PM IST

ಚಿಕ್ಕಮಗಳೂರು: ನೀರು ಹರಿಯುವ ಜಾಗದಲ್ಲಿ ಕಾಮಗಾರಿ ನಡೆಸಿದ್ದರಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಮಹಾಮಳೆಗೆ ನೀರು ಹರಿಯುವ ದಿಕ್ಕುಗಳೇ ಬದಲಾಗಿವೆ. ಆದ್ದರಿಂದ ನೀರು ಹರಿಯುವ ಪ್ರದೇಶಗಳಲ್ಲಿ ಕಾಮಗಾರಿ ನಡೆಸಬಾರದೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಗ್ರಾಮದಲ್ಲಿ ಮಹಾಮಳೆ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಸರಿಪಡಿಸುವ ಕೆಲಸ ನಡೆಯುತ್ತಿದೆ. ಆದರೆ ತಾಲೂಕು ಆಡಳಿತದಿಂದ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರಿಂದ ನದಿಯ ದಿಕ್ಕೇ ಬದಲಾಗಿ ಹೋಗುತ್ತದೆ. ಮುಂದಿನ ದಿನಗಳಲ್ಲಿ ಮತ್ತೆ ನದಿ ತುಂಬಿ ಹರಿದು ಮನೆಗಳು ಜಲಾವೃತವಾಗುತ್ತವೆ. ಆದ್ದರಿಂದ ನೀರು ಹರಿಯುವ ಪ್ರದೇಶಗಳಲ್ಲಿ ಕಾಮಾಗಾರಿಗಳನ್ನು ನಡೆಸಬಾರದು ಎಂದು ಬಂಕೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ

ಪ್ರತಿಭಟನಾಕಾರರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದು, ಕೂಡಲೇ ಶಾಸಕರು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದರು.

Intro:Kn_Ckm_03_Protest_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಮಹಾ ಮಳೆಗೆ ನೀರು ಹರಿಯುವ ದಿಕ್ಕು ಗಳೇ ಬದಲಾಗಿ ಹೋಗಿದೆ.ಈ ದಿಕ್ಕು ಬದಲಾದ ಕಾರಣ ಹತ್ತಾರೂ ಮನೆಗಳು ಧರೆಗೆ ಉರುಳಿದ್ದು ಮಲೆನಾಡು ಭಾಗದ ನೂರಾರು ಜನರ ಜೀವನ ಸರ್ವನಾಶವಾಗಿ ಹೋಗಿದೆ. ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಗ್ರಾಮದಲ್ಲಿಯೂ ಈ ಮಳೆ ನಾನಾ ಅವಾಂತರಗಳನ್ನೇ ಸೃಷ್ಟಿ ಮಾಡಿ ಹೋಗಿದ್ದು ಅದನ್ನು ಸರಿ ಪಡಿಸುವ ಕೆಲಸ ನಡೆಯುತ್ತಿದೆ.ಆದರೇ ತಾಲೂಕ್ ಆಡಳಿತದಿಂದಾ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕ ವಾಗಿದ್ದು ಇದರಿಂದ ನದಿಯ ದಿಕ್ಕೇ ಬದಲಾಗಿ ಹೋಗುತ್ತದೆ.ಮುಂದಿನ ದಿನಗಳಲ್ಲಿ ಮತ್ತೆ ನದಿಯ ಹೆಚ್ಚಳದಿಂದಾಗಿ ಮನೆಗಳು ಧರೆರೆ ಉರುಳುತ್ತವೆ ಎಂದೂ ಈ ಕಾಮಗಾರಿಯನ್ನು ವಿರೋಧ ವ್ಯಕ್ತ ಪಡಿಸಿ ಬಂಕೇನ ಹಳ್ಳಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದು ಕೂಡಲೇ ಶಾಸಕರು ಹಾಗೂ ಗುತ್ತಿಗೆ ದಾರರು ಸ್ಥಳಕ್ಕೇ ಬರಬೇಕು ಎಂದೂ ಆಗ್ರಹಿಸುತ್ತಿದ್ದಾರೆ.ಈಗಾಗಲೇ ಮಹಾ ಮಳೆಗೆ ನಲುಗಿ ಹೋಗಿರುವ ಈ ಗ್ರಾಮಸ್ಥರು ಈ ಕಾಮಗಾರಿಯಿಂದಾ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದೂ ಹೇಳುತ್ತಿದ್ದಾರೆ...

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.