ETV Bharat / state

ದಾರಿಯಲ್ಲಿ ಸಿಕ್ಕ ಪರ್ಸ್​​ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಕ್ಕಳು! - ಚಿಕ್ಕಮಗಳೂರು ಸುದ್ದಿ

ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕತೆ ಅನ್ನೋದು ಮರೆಯಾಗುತ್ತಿದೆ. ಅಂತದ್ದರಲ್ಲಿ ಇಲ್ಲೊಂದು ಶಾಲೆಯ ಮಕ್ಳಳು ದಾರಿಯಲ್ಲಿ ಸಿಕ್ಕ ಪರ್ಸ್​ ಒಂದನ್ನು ಪ್ರಾಮಾಣಿಕವಾಗಿ ಅದರ ವಾರಸುದಾದರಿಗೆ ಹಿಂತಿರುಗಿಸಿದ್ದಾರೆ.

school children
ಶಾಲಾ ಮಕ್ಕಳು
author img

By

Published : Dec 25, 2019, 6:10 PM IST

ಚಿಕ್ಕಮಗಳೂರು: ದಾರಿಯಲ್ಲಿ ಸಿಕ್ಕ ಪರ್ಸನ್ನು ಸಂಬಂಧಪಟ್ಟ ವ್ಯಕ್ತಿಗೆ ಮುಟ್ಟಿಸುವ ಮೂಲಕ ಶಾಲಾ ವಿದ್ಯಾರ್ಥಿಗಳು ಪ್ರಾಮಾಣಿಕತೆ ಮೆರೆದಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಶಿವಪುರ ರಸ್ತೆಯಲ್ಲಿರುವ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿದೆ. ಅದರಲ್ಲಿ 2 ಸಾವಿರಕ್ಕೂ ಅಧಿಕ ಹಣವಿದ್ದು, ಎಟಿಎಂ ಕಾರ್ಡ್​ಗಳು ಸೇರಿದಂತೆ ಇನ್ನಿತರೆ ಪ್ರಮುಖ ದಾಖಲೆಗಳು ಇದ್ದವು. ಇದನ್ನು ಗಮನಿಸಿದ ಶಾಲಾ ವಿದ್ಯಾರ್ಥಿಗಳಾದ ಭರತ್, ಶರತ್, ಚೈತ್ರಾ ಭೂಮಿಕಾ ಆ ಪರ್ಸ್​ನ್ನು ಶಾಲೆಯ ಶಿಕ್ಷಕರಾದ ಸುಖೇಶ್ ಅವರಿಗೆ ತಂದು ನೀಡಿದ್ದಾರೆ.

ಕೂಡಲೇ ಶಾಲಾ ಶಿಕ್ಷಕ ಸುಖೇಶ್ ಪರ್ಸ್ ಕಳೆದುಕೊಂಡವರನ್ನು ಪತ್ತೆ ಮಾಡಿ ಶಾಲೆಗೆ ಕರೆಯಿಸಿ ಶಾಲಾ ಮಕ್ಕಳ ಕೈಯಿಂದಲೇ ಪರ್ಸನ್ನು ಆ ವ್ಯಕ್ತಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದು, ಮಕ್ಕಳ ಪ್ರಾಮಾಣಿಕತೆಗೆ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Intro:Kn_Ckm_03_Good_children_av_7202347Body:ಚಿಕ್ಕಮಗಳೂರು :-

ದಾರಿಯಲ್ಲಿ ಸಿಕ್ಕ ಪರ್ಸ್ ನ್ನು ಸಂಭದ ಪಟ್ಟ ವ್ಯಕ್ತಿಗಳಿಗೆ ಅದನ್ನು ಮುಟ್ಟಿಸುವಲ್ಲಿ ಶಾಲಾ ವಿದ್ಯಾರ್ಥಿಗಳು ಯಶಸ್ವಿಯಾಗಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆಯನ್ನು ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಶಿವಪುರ ರಸ್ತೆಯಲ್ಲಿರುವ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿದೆ. ಅದರಲ್ಲಿ ಎರಡೂ ಸಾವಿರಕ್ಕೂ ಅಧಿಕ ಹಣದ್ದು ಎಟಿಎಮ್ ಕಾರ್ಡ ಗಳು ಸೇರಿದಂತೆ ಇನ್ನಿತರೆ ಪ್ರಮುಖವಾದ ದಾಖಲೆಗಳು ಆ ಪರ್ಸ್ ನಲ್ಲಿ ಇದ್ದವು. ಇದನ್ನು ಗಮನಿಸಿದ ಶಾಲಾ ವಿದ್ಯಾರ್ಥಿಗಳಾದ ಭರತ್, ಶರತ್, ಚೈತ್ರಾ ಭೂಮಿಕಾ ಆ ಪರ್ಸ್ ನ್ನು ಶಾಲೆಯ ಶಿಕ್ಷಕರಾದ ಸುಖೇಶ್ ಅವರಿಗೆ ತಂದೂ ತಲುಪಿಸಿದ್ದಾರೆ. ಕೂಡಲೇ ಶಾಲಾ ಶಿಕ್ಷಕ ಸುಖೇಶ್ ಅವರು ಪರ್ಸ್ ಕಳೆದು ಕೊಂಡವರನ್ನು ಪತ್ತೆ ಮಾಡಿ ಶಾಲೆಗೆ ಕರೆಯಿಸಿ ಶಾಲಾ ಮಕ್ಕಳ ಕೈಯಿಂದಲೇ ಆ ಪರ್ಸ್ ನ್ನು ಆ ವ್ಯಕ್ತಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದು ಮಕ್ಕಳ ಪ್ರಾಮಾಣಿಕತೆಗೆ ಶಾಲಾ ಸಿಬ್ಬಂಧಿಗಳು ಹಾಗೂ ಸ್ಥಳೀಯರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.