ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ ನಡುವೆ ಜಿಲ್ಲೆಯ ಪೋಲಿಸರು ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮೆಡಿಕಲ್ ಸೆಲ್ ತೆರೆದು ಸಾರ್ವಜನಿಕರ ಬಳಿ ಸಾಕಷ್ಟು ಪ್ರಶಂಸೆ ಗಳಿಸಿಕೊಂಡಿದಾರೆ.
ಜಿಲ್ಲೆಯ ಪೊಲೀಸರು ಸಾರ್ವಜನಿಕರಿಗೆ ಹಾಗೂ ವೃದ್ದರಿಗೆ, ಬಡವರಿಗೆ, ನಿರ್ಗತಿಕರಿಗೆ ಪಡಿತರ, ಆಹಾರ ಸಾಮಗ್ರಿ, ಹಾಲು, ತರಕಾರಿ ನೀಡಿ ಮಾನವೀಯತೆ ತೊರುವುದರ ಮೂಲಕ ಸಾರ್ವಜನಿಕರ ಬಳಿ ಸಾಕಷ್ಟು ಪ್ರಶಂಸೆ ಗಳಿಸಿಕೊಂಡಿದ್ದರು. ಆದರೇ ಇಂದು ಮಹತ್ವದ ತಿರ್ಮಾನ ತೆಗೆದುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಕೆಲಸಕ್ಕೆ ಮುಂದಾಗಿದೆ.
ಯಾವುದೇ ಸಾರ್ವಜನಿರಿಗೆ ತಮಗೆ ಬೇಕಾದ ಮಾತ್ರೆಗಳು, ಔಷಧಗಳು ಚಿಕ್ಕಮಗಳೂರು ಜಿಲ್ಲೆಯ ಮೆಡಿಕಲ್ಸ್ ಸ್ಟೋರ್ ಗಳಲ್ಲಿ ಲಭ್ಯವಿಲ್ಲದೇ ಇದ್ದರೆ. ಅದು ಶಿವಮೊಗ್ಗ, ಹಾಸನ , ಬೆಂಗಳೂರಿಗೆ ಹೋಗುವ ಅವಶ್ಯಕತೆ ಇದ್ದರೇ, ಸಾರ್ವಜನಿಕರ ಸೇವೆಗಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರ ಪೋಲಿಸ್ ಠಾಣೆ, ಕೊಪ್ಪ ಪೊಲೀಸ್ ಠಾಣೆ, ಮತ್ತು ಕಡೂರು ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮೆಡಿಕಲ್ ಸೆಲ್ ತೆರೆಯಲಾಗಿದೆ.
ಸಾರ್ವಜನಿಕರು ತಮಗೆ ಅವಶ್ಯಕವಿರುವ ಔಷಧಗಳ ಪಟ್ಟಿಯನ್ನು ಇಲ್ಲಿಗೆ ತಂದು ನೀಡಿದಲ್ಲಿ, ಎರಡೂ ಮೂರು ದಿನಗಳಲ್ಲಿ ನಿಮಗೆ ಬೇಕಾದ ಔಷಧಗಳನ್ನು ಬೇರೆ ಜಿಲ್ಲೆಯಿಂದ ತರಿಸಿ ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಸೇವೆಯ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪೋಲಿಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.