ಚಿಕ್ಕಮಗಳೂರು : ಅಪ್ರಾಪ್ತೆ ಮೇಲೆ ಆಕೆಯ ಮಲತಂದೆಯೇ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ.
ಕೃಷ್ಣ (34) ಎಂಬ ವ್ಯಕ್ತಿ ಈ ಕೃತ್ಯವೆಸಗಿದ ಆರೋಪಿ. ಈತನ ಪತ್ನಿ ಕೂಲಿ ಕೆಲಸಕ್ಕೆ ಹೋದಾಗ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕಳೆದ 5 ತಿಂಗಳಿನಿಂದ 7 ಬಾರಿ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗ್ತಿದೆ.
ಇದನ್ನೂ ಓದಿ: ಮೈಸೂರು : ಆನ್ಲೈನ್ ಕ್ಲಾಸ್ ನಡುವೆ ಅಶ್ಲೀಲ ವಿಡಿಯೋ ರವಾನೆ, ದೂರು ದಾಖಲು
ಈ ಕುರಿತು ಯಾರಿಗೂ ಹೇಳದಂತೆ ಆರೋಪಿ ಕೃಷ್ಣ ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಇತ್ತೀಚೆಗೆ ತಾಯಿಗೆ ಈ ವಿಚಾರ ಗೊತ್ತಾಗಿ, ಗಂಡನನ್ನು ಪ್ರಶ್ನಿಸಿದ್ದಕ್ಕೆ ಆಕೆಯ ಮೇಲೆಯೂ ಹಲ್ಲೆ ನಡೆಸಿದ್ದಾನೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.