ETV Bharat / state

ಕಾಫಿನಾಡಲ್ಲಿ ಅರಣ್ಯಾಧಿಕಾರಿಗಳ ಮೋಜು-ಮಸ್ತಿ? .. ವಾಹನ ತಡೆದ ಗ್ರಾಮಸ್ಥರು - chickmagaluru officers violating rules

ಚಿಕ್ಕಮಗಳೂರಿನಿಂದ ಹಿರಿಯ ಅಧಿಕಾರಿಗಳ ತಂಡ ಹತ್ತಕ್ಕೂ ಅಧಿಕ ಕಾರು, ಜೀಪ್​ನಲ್ಲಿ "ಗೇಮ್ ಫಾರೆಸ್ಟ್" ಗೆ ಹೊರಟಿದ್ದನ್ನು ನೋಡಿ, ಕಾರು-ಜೀಪುಗಳನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

chickmagaluru people outrage against officers who violating rules
ಕಾಫಿನಾಡಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ; ಗ್ರಾಮಸ್ಥರ ಆರೋಪ
author img

By

Published : May 21, 2021, 1:09 PM IST

ಚಿಕ್ಕಮಗಳೂರು: ಕೊರೊನಾ ಕಾಲದಲ್ಲಿ ಕಾಫಿನಾಡಿನಲ್ಲಿ ಅಧಿಕಾರಿಗಳು ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಪಾರ್ಟಿಗೆ ತೆರಳಲು ಹೊರಟಿದ್ದ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿ ಬಳಿ ನಡೆದಿದೆ.

ಕಾಫಿನಾಡಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ; ಗ್ರಾಮಸ್ಥರ ಆರೋಪ

ಚಿಕ್ಕಮಗಳೂರಿನಿಂದ ಹಿರಿಯ ಅಧಿಕಾರಿಗಳ ತಂಡ ಹತ್ತಕ್ಕೂ ಅಧಿಕ ಕಾರು, ಜೀಪ್​ನಲ್ಲಿ ಹೊರಟಿದ್ದನ್ನು ನೋಡಿ, ಕಾರು-ಜೀಪುಗಳನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ವೇಳೆಯಲ್ಲಿ ನಿಮಗೆ ಮೋಜು-ಮಸ್ತಿ ಬೇಕಾ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಿರುಪಯುಕ್ತವಾದ ವೆಂಟಿಲೇಟರ್​ಗಳು; ಎಂಸಿಎಚ್​ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಸಂತವೇರಿ ಸಮೀಪದ "ಗೇಮ್ ಫಾರೆಸ್ಟ್" ಗೆ ಈ ತಂಡ ಹೊರಟಿತ್ತು ಎನ್ನಲಾಗಿದೆ. ಗ್ರಾಮಸ್ಥರು ಘೇರಾವ್ ಹಾಕಿದ ಹಿನ್ನೆಲೆ ದಾರಿ ಕಾಣದೆ ಎಲ್ಲರೂ ವಾಪಸ್ ಆಗಿದ್ದಾರೆ. ನಿನ್ನೆ ಸಂತವೇರಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು ಇಂದು ತಡವಾಗಿ ಬೆಳಕಿಗೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.