ETV Bharat / state

ವಿವಾಹಿತನೊಂದಿಗೆ ರಿಜಿಸ್ಟರ್ ಮ್ಯಾರೇಜ್.. ಎನ್​ಆರ್​​ ಪುರ ತಹಶೀಲ್ದಾರ್ ಗೀತಾಗೆ ಡಿಸಿ ನೋಟಿಸ್​ - ವಿಚ್ಛೇದನ ಪಡೆಯದವನೊಂದಿಗೆ ರಿಜಿಸ್ಟರ್ ಮ್ಯಾರೇಜ್

ವಿವಾಹಿತನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆದ ಹಿನ್ನೆಲೆ, ಎನ್.ಆರ್. ಪುರ ತಹಶೀಲ್ದಾರ್ ಗೀತಾಗೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ನೋಟಿಸ್ ನೀಡಿದ್ದಾರೆ.

chickmagaluru dc k n ramesh
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್ ರಮೇಶ್
author img

By

Published : Sep 21, 2021, 2:10 PM IST

ಚಿಕ್ಕಮಗಳೂರು: ಎನ್.ಆರ್. ಪುರ ತಹಶೀಲ್ದಾರ್ ಗೀತಾಗೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ನೋಟಿಸ್ ನೀಡಿದ್ದಾರೆ. ವಿವಾಹಿತನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆದ ಹಿನ್ನೆಲೆ, ಈ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಗ್ರಾಮ ಲೆಕ್ಕಿಗ ಶ್ರೀನಿಧಿ ಎಂಬುವರೊಂದಿಗೆ ತಹಶೀಲ್ದಾರ್ ಗೀತಾ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಸಂಬಂಧ ಶ್ರೀನಿಧಿ ಪತ್ನಿಯಿಂದ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಈಗಾಗಲೇ ಗೀತಾ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಆದರೆ ಮೊದಲ ಪತ್ನಿಯಿಂದ ಗ್ರಾಮ ಲೆಕ್ಕಿಗ ಶ್ರೀನಿಧಿ ವಿಚ್ಛೇದನವನ್ನು ಪಡೆದಿಲ್ಲ.

chickmagaluru dc k n ramesh
ತಹಶೀಲ್ದಾರ್ ಗೀತಾಗೆ ಡಿಸಿ ನೋಟಿಸ್​

ಇದನ್ನೂ ಓದಿ: ಮುಷ್ಕರ ವೇಳೆ ವಜಾಗೊಂಡಿದ್ದ 4,200 ಸಾರಿಗೆ ನೌಕರರು ಪುನರ್ ನೇಮಕ: ಸಚಿವ ಶ್ರೀರಾಮುಲು ಘೋಷಣೆ

2006 ರಲ್ಲಿ ದಾವಣಗೆರೆಯಲ್ಲಿ ಶ್ರೀನಿಧಿ ಮದುವೆಯಾಗಿದ್ದರು. ಜುಲೈ 19 ರಂದು ಮತ್ತೆ ಎನ್.ಆರ್. ಪುರದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಮದುವೆ ವೇಳೆ ಅವಿವಾಹಿತೆ ಎಂದು ತಹಶೀಲ್ದಾರ್ ಗೀತಾ ತೋರಿಸಿದ್ದಾರೆ.

ಶ್ರೀನಿಧಿ ಪತ್ನಿ ದೂರಿನ ಹಿನ್ನೆಲೆ ತಹಶೀಲ್ದಾರ್ ಗೀತಾಗೆ ನೋಟಿಸ್ ನೀಡಲಾಗಿದ್ದು, 7 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.