ETV Bharat / state

ಎರಡು ವರ್ಷ ಕಳೆದರೂ ದುರಸ್ಥಿಯಾಗದ ಚಾರ್ಮಾಡಿ ಘಾಟ್.. ಸ್ಥಳೀಯರ ಆತಂಕ, ಆಕ್ರೋಶ - ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್

ಒಂದೆಡೆ ಕಾಮಗಾರಿ ವಿಳಂಬ, ಮತ್ತೊಂದೆಡೆ ಭಾರೀ ವಾಹಗಳಿಗೆ ಬ್ರೇಕ್. ಈ ಎರಡೂ ಬೆಳವಣಿಗೆ ಮಲೆನಾಡಿಗರಿಗೆ ಮತ್ತಷ್ಟು ಸಮಸ್ಯೆ ಕಾಣಲು ಪ್ರಾರಂಭಿಸಿದೆ. ಕೆಎಸ್​​ಆರ್​​ಟಿಸಿ ಬಸ್‍ಗಳಿಗೆ ಚಾರ್ಮಾಡಿಯಲ್ಲಿ ಬ್ರೇಕ್ ಹಾಕಿರೋದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ..

charmed-ghat
ದುರಸ್ಥಿಯಾಗದ ಚಾರ್ಮಾಡಿ ಘಾಟ್
author img

By

Published : Mar 14, 2021, 6:56 PM IST

ಚಿಕ್ಕಮಗಳೂರು : ಕಳೆದ ಎರಡು ವರ್ಷಗಳ ಹಿಂದೆ ಸುರಿದ ಮಹಾ ಮಳೆ ನೆನೆಸಿಕೊಂಡರೇ ಇಂದಿಗೂ ಮಲೆನಾಡಿನ ಜನರು ಬೆಚ್ಚಿ ಬೀಳುತ್ತಾರೆ. ಸೇತುವೆಗಳು, ವಿದ್ಯುತ್ ಕಂಬಗಳು, ರಸ್ತೆಗಳು ಕುಸಿತ ಕಂಡಿದ್ದಕ್ಕೆ ಲೆಕ್ಕವೇ ಇಲ್ಲ. ಆದರೆ, ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಯಾವುದೇ ದುರಸ್ಥಿ ಕಾರ್ಯ ಮಾತ್ರ ಇಂದಿಗೂ ನಡೆದಿಲ್ಲ.

ದುರಸ್ಥಿಯಾಗದ ಚಾರ್ಮಾಡಿ ಘಾಟ್

ಓದಿ: ಉತ್ತರ ಪ್ರದೇಶದಲ್ಲಿ ಕಸದ ರಾಶಿಯಲ್ಲಿ ನೂರಾರು ಆಧಾರ್ ಕಾರ್ಡ್​ಗಳು ಪತ್ತೆ

ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಕೊಂಡಿ. 2019ರಲ್ಲಿ ಸುರಿದ ರಣಭೀಕರ ಮಳೆ 22 ಕಿ.ಮೀ ಅಂತರದ ಚಾರ್ಮಾಡಿ ಘಾಟ್‍ನಲ್ಲಿ ಸುಮಾರು 30ಕ್ಕೂ ಹೆಚ್ಚು ಕಡೆ ಭೂಕುಸಿತ ಉಂಟಾಗಿತ್ತು. ಮಂಗಳೂರು-ಚಿಕ್ಕಮಗಳೂರಿನ ಸಂಪರ್ಕ ಕೂಡ ತಿಂಗಳುಗಟ್ಟಲೇ ನಿಲ್ಲಿಸಲಾಗಿತ್ತು.

ಕೆಲಸ ಆರಂಭಿಸಿದ ಸರ್ಕಾರ ಮೂರೇ ತಿಂಗಳಲ್ಲಿ ಸರಿ ಮಾಡುತ್ತೇವೆ ಎಂದು ಆಶ್ವಾಸನೆ ಮೇಲೆ ಆಶ್ವಾಸನೆ ನೀಡಿದ್ದರು. ಆದರೆ, ಈ ಅವಘಡಗಳು ನಡೆದು ಎರಡು ವರ್ಷವಾದರೂ ರಸ್ತೆ ಕಾಮಗಾರಿ ಮುಗಿದಿಲ್ಲ. ಇದು ಮಲೆನಾಡಿಗರು ಸೇರಿ ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ.

ಒಂದೆಡೆ ಕಾಮಗಾರಿ ವಿಳಂಬ, ಮತ್ತೊಂದೆಡೆ ಭಾರೀ ವಾಹಗಳಿಗೆ ಬ್ರೇಕ್. ಈ ಎರಡೂ ಬೆಳವಣಿಗೆ ಮಲೆನಾಡಿಗರಿಗೆ ಮತ್ತಷ್ಟು ಸಮಸ್ಯೆ ಕಾಣಲು ಪ್ರಾರಂಭಿಸಿದೆ. ಕೆಎಸ್​​ಆರ್​​ಟಿಸಿ ಬಸ್‍ಗಳಿಗೆ ಚಾರ್ಮಾಡಿಯಲ್ಲಿ ಬ್ರೇಕ್ ಹಾಕಿರೋದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ.

ತುರ್ತು ಸಂದರ್ಭದಲ್ಲಿ ಯಾರಾದರೂ ಮಂಗಳೂರು-ಉಡುಪಿಗೆ ಹೋಗಬೇಕೆಂದರೆ ಖಾಸಗಿ ವಾಹನಗಳಿಗೆ ಸಾವಿರಾರು ರೂ. ಹಣ ನೀಡಬೇಕೆಂಬುದು ಸ್ಥಳೀಯರ ಅಳಲು. ರಸ್ತೆ ಕುಸಿದು ಎರಡು ವರ್ಷವಾದರೂ ಸರ್ಕಾರ ಇನ್ನೂ ಕಾಮಗಾರಿಯನ್ನ ಪೂರ್ಣಗೊಳಿಸದಿರುವುದು ಸ್ಥಳೀಯರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.