ETV Bharat / state

ಚಾರ್ಮಾಡಿ ಘಾಟ್​ನಲ್ಲಿ ಮಳೆ ಇಲ್ಲದಿದ್ದರೂ ಉರುಳುತ್ತಿವೆ ಬೃಹತ್ ಬಂಡೆಗಳು..!

author img

By

Published : Oct 24, 2020, 4:51 PM IST

ಕಳೆದ ಎರಡು ವರ್ಷಗಳಲ್ಲಿ ಚಾರ್ಮಾಡಿ ಘಾಟ್​ಗೆ ಬಿದ್ದಿರೋ ಹೊಡೆತ ಅಷ್ಟಿಷ್ಟಲ್ಲ. 2019 ರ ಮಹಾಮಳೆಗೆ ಇಡೀ ಚಾರ್ಮಾಡಿ ಘಾಟ್ ಅಲ್ಲೋಲ ಕಲ್ಲೋಲವಾಗಿತ್ತು. 20 ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಉಂಟಾಗಿ, ಬರೋಬ್ಬರಿ 6 ತಿಂಗಳು ಚಾರ್ಮಾಡಿ ಘಾಟ್ ರಸ್ತೆ ಬಂದ್ ಆಗಿತ್ತು..

Charmadi Ghat
ಚಾರ್ಮಾಡಿ ಘಾಟ್​ನಲ್ಲಿ ಮಳೆ ಇಲ್ಲದಿದ್ದರೂ ಉರುಳುತ್ತಿವೆ ಬೃಹತ್ ಬಂಡೆಗಳು

ಚಿಕ್ಕಮಗಳೂರು : ಚಾರ್ಮಾಡಿ ಘಾಟ್, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರೋ ಈ ರಮಣೀಯ ಸ್ಥಳದ ಬಗ್ಗೆ ಯಾರಿಗೆ ಕೇಳಿದರೂ ಹೇಳುತ್ತಾರೆ. ಈ ಮಾರ್ಗದಲ್ಲಿ ಸಂಚರಿಸೋದು ಒಂದು ರೋಮಾಂಚನ ಅನುಭವ. ಹಸಿರ ಸಿರಿ, ಹಾವು ಬಳುಕಿನ ರಸ್ತೆ, ರಸ್ತೆಯೂ ಕಾಣದಂತೆ ಕವಿಯೋ ದಟ್ಟ ಮಂಜು. ಆದರೆ, ಇಂತಹ ಸುಂದರ ಪಯಣದ ನಡುವೆ ಏನಾದರೂ ಗ್ರಹಚಾರ ಕೆಟ್ಟರೇ, ನಿಮ್ಮ ಜೀವಕ್ಕೆ ಕುತ್ತು ಬಂದ್ರೂ ಬರಬಹುದು.

ಇಲ್ಲಿನ ಸೌಂದರ್ಯವನ್ನು ಯಾವ ಪದಗಳಿಂದ ವರ್ಣನೆ ಮಾಡಿದರೂ ಕಡಿಮೆ. ಅಷ್ಟೊಂದು ಪ್ರಕೃತಿಯ ಐಸಿರಿಯನ್ನೇ ಹೊದ್ದುಕೊಂಡಿರೋ ಚಾರ್ಮಾಡಿ ಘಾಟ್ ಬಗ್ಗೆ ಎಷ್ಟು ಹೇಳಿದರೂ ಸಾಲೋದಿಲ್ಲ. ಬೆಟ್ಟ ಗುಡ್ಡಗಳು, ಗಿರಿ ಶಿಖರಗಳು, ದಟ್ಟ ಮಂಜು, ಈ ಅಂಕು ಡೊಂಕಾದ ರಸ್ತೆಯ ಸಂಚಾರವೇ ಒಂಥರಾ ನಮಗೆ ಪ್ರಕೃತಿ ಕೊಟ್ಟಿರೋ ವರದಾನ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರೋ ಈ ಚಾರ್ಮಾಡಿ ಘಾಟ್ ಅದೆಷ್ಟೋ ವಿಸ್ಮಯಗಳನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿದ್ಯೋ ಆ ದೇವರೇ ಬಲ್ಲ.

ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ರಸ್ತೆ ಕೊಂಡಿಯಾಗಿರೋ ಈ ರಸ್ತೆ ಇತ್ತೀಚೆಗೆ ಯಾಕೋ ಡೇಂಜರ್ ಅನ್ನೋ ರೀತಿಯಲ್ಲಿ ಭಾಸವಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಚಾರ್ಮಾಡಿ ಘಾಟ್​ಗೆ ಬಿದ್ದಿರೋ ಹೊಡೆತ ಅಷ್ಟಿಷ್ಟಲ್ಲ. 2019ರ ಮಹಾಮಳೆಗೆ ಇಡೀ ಚಾರ್ಮಾಡಿ ಘಾಟ್ ಅಲ್ಲೋಲ ಕಲ್ಲೋಲವಾಗಿತ್ತು. 20ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಉಂಟಾಗಿ, ಬರೋಬ್ಬರಿ 6 ತಿಂಗಳು ಚಾರ್ಮಾಡಿ ಘಾಟ್ ರಸ್ತೆ ಬಂದ್ ಆಗಿತ್ತು.

ಇತಿಹಾಸದಲ್ಲಿ ಎಂದೂ ಕಂಡರಿಯದ ರೀತಿ ಈ ರಸ್ತೆ ಘಾಸಿಯಾಗಿದೆ. ಆ ಬಳಿಕ ಈ ಬಾರಿಯ ಮಳೆಗಾಲದಲ್ಲೂ ಅಲ್ಲಲ್ಲಿ ಗುಡ್ಡ ಕುಸಿತವಾಗಿ ಅನೇಕ ಸಲ ಚಾರ್ಮಾಡಿ ಘಾಟ್ ಬ್ಲಾಕ್ ಆಗಿತ್ತು. ಇದೀಗ ಮಳೆ ಬಿಟ್ಟಿದೆ. ಭಾರೀ ವಾಹನಗಳನ್ನ ಹೊರತು ಪಡಿಸಿ ಬಸ್ಸು, ಕಾರು, ಜೀಪ್, ಟಿಟಿ ಸೇರಿದಂತೆ ಲಘು ವಾಹನಗಳು ಸಂಚರಿಸುತ್ತಿವೆ. ಈ ಮಧ್ಯೆ ಮಳೆ ಇಲ್ಲದಿದ್ರೂ ಅಲ್ಲಲ್ಲಿ ಭಾರೀ ಗಾತ್ರದ ಬಂಡೆಗಳು ರೋಡಿಗೆ ಅಪ್ಪಳಿಸಿ ಬೀಳುತ್ತಿರೋದು ಭಯವನ್ನು ಹುಟ್ಟಿಸುತ್ತಿವೆ.

ಕಳೆದ ಕೆಲ ದಿನಗಳ ಹಿಂದೇ ಬೃಹತ್ ಗಾತ್ರದ ಬಂಡೆಯೊಂದು ಇದ್ದಕ್ಕಿದ್ದ ಹಾಗೇ ಉರುಳಿದೆ. ಆ ಸಮಯದಲ್ಲಿ ವಾಹನಗಳು ಕೂಡ ಸಂಚರಿಸುತ್ತಾ ಇದ್ದವು. ಕಾರೊಂದು ಪಾಸಾದ ಕೂದಲೆಳೆ ಅಂತರದಲ್ಲಿ ಬಂಡೆ ರಸ್ತೆಗೆ ಉರುಳಿದೆ. ಬಡಪಾಯಿ, ಜೀವ ಉಳಿದಿದ್ದೇ ಹೆಚ್ಚು ಅಂತಾ ಕಾರಿನ ಸವಾರ ನಿಟ್ಟುಸಿರು ಬಿಟ್ಟಿದ್ದಾನೆ. ಹೀಗೆ ಬಂಡೆಗಳು ರಸ್ತೆಗೆ ಉರುಳುತ್ತಿರೋದು ಪ್ರಯಾಣಿಕರಲ್ಲಿ ಜೀವಭಯ ಸೃಷ್ಟಿಸಿದೆ. ಚಾರ್ಮಾಡಿ ಘಾಟ್​ನ ಹಲವೆಡೆ ಈ ರೀತಿ ಗುಡ್ಡಕ್ಕೆ ಅಂಟಿಕೊಂಡಿರುವ ಬಂಡೆಗಳು ಸಡಿಲಗೊಂಡಿದ್ದು, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿವೆ.

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಳೆಯಾಗುವ ಸಂದರ್ಭದಲ್ಲಿ ಬಂಡೆಗಳು ಬೀಳೋದು ಸಾಮಾನ್ಯವಾಗಿದೆ. ಆದರೆ, ಬಿಸಿಲಿನ ಸಂದರ್ಭದಲ್ಲೂ ಬಂಡೆಗಳು ಮೇಲಿಂದ ರಸ್ತೆಗೆ ಬೀಳುತ್ತಿವೆ ಅಂದರೇ ಎಂತವರು ಕೂಡ ಈ ರಸ್ತೆಯಲ್ಲಿ ಸಂಚರಿಸಲು ಒಂದು ಕ್ಷಣ ಯೋಚನೆ ಮಾಡುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.