ಚಿಕ್ಕಮಗಳೂರು: ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಲೋಕಕಲ್ಯಾಣಕ್ಕಾಗಿ ಶುಕ್ರವಾರ ವಿಶೇಷ ಚಂಡಿಕಾ ಹೋಮ ನಡೆಯಿತು. ನವರಾತ್ರಿಯ ಪ್ರತಿದಿನವೂ ಅನ್ನಪೂರ್ಣೇಶ್ವರಿಗೆ ವಿವಿಧ ಅಲಂಕಾರಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊನೆಯ ದ್ವಾದಶಿ ದಿನದಂದು ಲೋಕಕಲ್ಯಾಣಾರ್ಥ ಚಂಡಿಕಾ ಹೋಮ ನೆರವೇರಿತು. ಮಹಾಚಂಡಿಕಾ ಹೋಮ ಕೈಗೊಳ್ಳುವುದರಿಂದ ಜಗತ್ತಿನೆಲ್ಲೆಡೆ ಸಮೃದ್ದಿ, ಶಾಂತಿ ನೆಲೆಸಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೋಮದಲ್ಲಿ ಧರ್ಮದರ್ಶಿ ಕುಟುಂಬ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಇದನ್ನೂಓದಿ: ವಿಜಯಪುರ ಜಿಲ್ಲೆಗೆ ಬಸವಣ್ಣನವರ ಹೆಸರಿಡುವ ವಿಚಾರ.. 15 ದಿನದೊಳಗೆ ಅಭಿಪ್ರಾಯ ಸಲ್ಲಿಕೆಗೆ ಜಿಲ್ಲಾಡಳಿತದ ಗಡುವು