ETV Bharat / state

ಅಡಿಕೆ ಎಲೆ ಚುಕ್ಕೆ ರೋಗ ತಡೆಯಲು ಕೇಂದ್ರ ಸರ್ಕಾರ ಎನ್​ಎಸ್​ಸಿ ಸ್ಥಾಪಿಸಿದೆ: ಜೆ.ಪಿ.ನಡ್ಡಾ

ಡಬಲ್ ಎಂಜಿನ್ ಸರ್ಕಾರ ರೈತರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದವರನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

BJP National President JP Nadda
ಕೇಂದ್ರ ಸರ್ಕಾರ ಎಲೆ ಚುಕ್ಕೆ ರೋಗ ತಡೆಯಲು ಎನ್​ಎಸ್​ಸಿ ಸ್ಥಾಪಿಸಿದೆ: ಜೆಪಿ ನಡ್ಡಾ
author img

By

Published : Feb 20, 2023, 9:56 PM IST

ಚಿಕ್ಕಮಗಳೂರು: "ಅಡಿಕೆಗೆ ಕನಿಷ್ಠ ಆಮದು ಬೆಲೆಯನ್ನು ಕೇಂದ್ರ ಸರ್ಕಾರ ಮೂರು ಪಟ್ಟು ಹೆಚ್ಚಿಸಿದೆ. ಈ ಮೂಲಕ ಅಸ್ಥಿರಗೊಳಿಸುವ ಬೆಲೆ ಮತ್ತು ಕಳಪೆ ಗುಣಮಟ್ಟದ ಅಡಿಕೆ ದೇಶೀಯ ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಯಲು ನಾವು ಪ್ರಯತ್ನಿಸಿದ್ದೇವೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಸೋಮವಾರ ಕೊಪ್ಪಕ್ಕೆ ಆಗಮಿಸಿ ಪಟ್ಟಣದಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಅವರು ಮಾತನಾಡಿದರು.

"ಕೇಂದ್ರ ಸರ್ಕಾರ ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗಗಳನ್ನು ತಡೆಯಲು ಎನ್​ಎಸ್​ಸಿ ಸ್ಥಾಪಿಸಿದೆ. ಕರ್ನಾಟಕ ತನ್ನ ಉತ್ಪಾದಕತೆಯನ್ನು ಹೆಚ್ಚಿಸಲು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ಮಂಜೂರು ಮಾಡಿದೆ. ಡಬಲ್ ಎಂಜಿನ್ ಸರ್ಕಾರ ರೈತರು, ಮಹಿಳೆಯರು, ಬಡವರು, ದಲಿತರು, ಯುವಕರು ಹೀಗೆ ಸಮಾಜದ ಎಲ್ಲ ವರ್ಗದವರನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದೆ" ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, "ಅಡಿಕೆ‌ ಮಾನ ಕಳೆದವರು ಯಾರೆಂದು ಕಾಂಗ್ರೆಸ್​ನವರು ಪ್ರಶ್ನೆ ಹಾಕಿದ್ದಾರೆ. ಅಡಿಕೆ ಮಾನ ಕಳೆದವರು ಕಾಂಗ್ರೆಸ್ಸಿಗರು. 2012ರಲ್ಲಿ ಇಂದಿರಾ ಜೈಸಿಂಗ್ ಅಡಿಕೆ ಹಾನಿಕಾರಕ ಎಂದು ವರದಿ ನೀಡಿದ್ದರು. ಎಲೆ-ಅಡಿಕೆ ಕೊಟ್ಟರೆ ಬಾಂಡ್ ಪೇಪರ್ ಗಿಂತ ಹೆಚ್ಚು ಶಕ್ತಿ. ಎಲೆ-ಅಡಿಕೆ ನೀಡಿ ಕೊಟ್ಟ ಮಾತು ಶತಮಾನಕ್ಕೂ ನಿಲ್ಲುತ್ತದೆ. ಅಂಥ ಅಡಿಕೆ ಮಾನ ಕಳೆದವರು ಕಾಂಗ್ರೆಸ್ಸಿಗರು. ಕಾಂಗ್ರೆಸ್ ಸುಳ್ಳನ್ನು ಮನೆ ದೇವರು ಮಾಡಿ ಕೊಳ್ಳಬಹುದು ಅಷ್ಟೇ." ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, "2012ರಲ್ಲಿ ಅಡಿಕೆಗೆ MIP 75 ರೂಪಾಯಿ ಇತ್ತು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ 161 ರೂಪಾಯಿ ಆಗಿತ್ತು. ಈಗ ಅಡಿಕೆಯ MIP 251ರೂ ಇದೆ, ಇದು ಬಿಜೆಪಿ ಸರ್ಕಾರದ ಸಾಧನೆ. ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿ ಕಾರಣ. ಮುಂದೆ ಅಡಿಕೆಯ MIP 350 ರೂಪಾಯಿ ಆಗಲಿದೆ. ಇಂದು ಅಡಿಕೆ ದರ ಹೆಚ್ಚಾಗುತ್ತಿರುವುದು ಬಿಜೆಪಿ ಸರ್ಕಾರದಿಂದ ಎಲೆಚುಕ್ಕಿ ರೋಗದಿಂದ ಇಂದು ತೋಟಗಳು ನಾಶವಾಗಿವೆ. 1946 ರಿಂದಲೂ ಹಳದಿ ಎಲೆ ರೋಗ ಬೆಳೆಗಾರರ ಬದುಕು ನಾಶ ಮಾಡಿದೆ. ಎಲೆಚುಕ್ಕಿ ರೋಗದ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಸರ್ಕಾರ ವಿಜ್ಞಾನಿಗಳನ್ನು ಕೂಡ ನೇಮಕ ಮಾಡಿದೆ" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಜೀವರಾಜ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಧಾರವಾಡದಲ್ಲಿ ಲಲಿತ ಕಲಾ ಅಕಾಡೆಮಿಗೆ ಶಿಲಾನ್ಯಾಸ: ಹಾಡು ಹೇಳಿ ರಂಜಿಸಿದ ಕೇಂದ್ರ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.