ಚಿಕ್ಕಮಗಳೂರು: ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿ ರೈತರಿಗೆ ಮುಕ್ತ ಮಾರುಕಟ್ಟೆ ಅವಕಾಶವಿರುತ್ತದೆ. ಯಾವುದೇ ಕಾಯ್ದೆ ಜನವಿರೋಧಿ ಕಾಯ್ದೆಯಾದರೆ, ಆ ಕಾಯ್ದೆ ಉಳಿಯುವುದಿಲ್ಲ, ಸರ್ಕಾರವೂ ಉಳಿಯುವುದಿಲ್ಲ. ರೈತರಿಗೆ ಕಾಯ್ದೆಯಿಂದ ಅನುಕೂಲ ಆದರೆ ಕಾಯ್ದೆ ಉಳಿಯುತ್ತದೆ. ಅನಾನುಕೂಲ ಆದರೆ ಅದನ್ನು ತೆಗೆದು ಹಾಕಲಾಗುತ್ತದೆ. ಕಾಯ್ದೆ ಜಾರಿಗೆ ತಂದ ಸರ್ಕಾರವೇ ಅದನ್ನು ತೆಗೆದು ಹಾಕುವ ಅಧಿಕಾರವನ್ನು ಹೊಂದಿರುತ್ತದೆ ಎಂದರು.
ಈ ಕಾಯ್ದೆ ಕೇವಲ ಪ್ರಾಯೋಗಿಕವಾಗಿದ್ದು, ಹೆಚ್ಚು ಸ್ಪರ್ಧೆಯಿಂದ ರೈತರಿಗೆ ತುಂಬಾ ಅನುಕೂಲ ಆಗುತ್ತದೆ. ಇಲ್ಲಿ ರೈತರೇ ಸಂಘಟಿತರಾಗಿ ಮಾರುಕಟ್ಟೆಯನ್ನು ಹುಟ್ಟು ಹಾಕಬಹುದು. ರೈತರ ಸೊಸೈಟಿ ಮಾಡಿಕೊಂಡು ವ್ಯಾಪಾರ ಮಾಡಬಹುದು. ಇದರಿಂದ ಮುಂಚಿತವಾಗಿ ರೈತರಿಗೆ ಬೆಲೆ ಖಾತರಿಯಾಗುತ್ತದೆ. ಶಾಸನಬದ್ಧ ಕಾಯ್ದೆ ಬರುವ ಕಾರಣ ರೈತರಿಗೆ ಯಾವುದೇ ರೀತಿಯ ಮೋಸ ಆಗುವುದಿಲ್ಲ ಎಂದು ಹೇಳಿದರು.