ಚಿಕ್ಕಮಗಳೂರು: ಹರ್ಷನಿಗಾಗಲಿ ಆಪಾದಿತರಿಗಾಗಲಿ ವ್ಯಕ್ತಿಗತ ಜಗಳ ಇಲ್ಲ ಎಂದು ಮೇಲ್ನೋಟಕ್ಕೆ ಕಂಡಿತ್ತು. ವೈಯಕ್ತಿಕ ಕಾರಣಗಳಿಂದ ಹರ್ಷ ಕೊಲೆಯಾಗಿಲ್ಲ ಎಂದು ಎನ್ಐಎ ದೃಢೀಕರಿಸಿದೆ. ಕೋಮುಗಲಭೆ ಸೃಷ್ಟಿಸಬೇಕೆಂಬ ಸಂಚಿನಲ್ಲೇ ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಯಾರೋ ವೈಯಕ್ತಿಕವಾಗಿ ತೆಗೆದುಕೊಂಡ ತೀರ್ಮಾನ ಇದು ಅಂತ ನನಗೆ ಅನ್ನಿಸಲ್ಲ. ಇದರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ. ಫೈನಾನ್ಸ್ ಮಾಡುವವರು, ಪ್ರಚೋದನೆ ಕೊಟ್ಟವರು ಯಾರು, ಹಣದ ವ್ಯವಸ್ಥೆ ಮಾಡುವವರು ಯಾರು?. ನ್ಯಾಯಾಲಯದಲ್ಲಿ ಬೆಂಬಲ ಕೊಡುವವರು ಯಾರು?, ಇದೆಲ್ಲದರ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ನಿನ್ನೆ ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು. ಈ ಹಿನ್ನೆಲೆಯಲ್ಲೇ ಎನ್ಐಎಗೆ ಕೇಸ್ ವಹಿಸಿರುವುದು, ಸಮಗ್ರ ತನಿಖೆಯಾಗಲಿ. ಇದರ ನೆಟ್ವರ್ಕ್ ನೋಡೋಣ, ರಾಜ್ಯದಲ್ಲೇ ಇದ್ದಾರೋ, ಹೊರ ರಾಜ್ಯದಲ್ಲಿ ಇದ್ದಾರೋ ಗೊತ್ತಾಗಲಿ ಎಂದರು.
ಇದನ್ನೂ ಓದಿ: ಕಿರುಕುಳದಿಂದ ವೈದ್ಯೆ ಆತ್ಮಹತ್ಯೆ: ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ