ಚಿಕ್ಕಮಗಳೂರು : ಕಾಫಿನಾಡಿನಲ್ಲಿ ವರುಣನ ಆರ್ಭಟ ತಣ್ಣಗಾಗಿದ್ದು, ವಾತಾವರಣ ಕೂಲ್ ಆಗಿದೆ. ಹೊಲದ ಕೆಲಸಗಳನ್ನು ಮುಗಿಸಿರುವ ರೈತರು ತಮ್ಮ ಕೆಲಸಕ್ಕೆ ಸಾಥ್ ಕೊಟ್ಟ ಎತ್ತುಗಳೊಂದಿಗೆ ಮನರಂಜನೆಗೆ ಇಳಿದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ರಾಜ್ಯ ಮಟ್ಟದ ಜೋಡೆತ್ತಿನ ಸ್ಪರ್ಧೆ ನಡೆಸಿ ಸಂಭ್ರಮಿಸಿದ್ದಾರೆ.
ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಿಂದ 93 ಜೋಡಿ ಎತ್ತುಗಳು 2ನೇ ವರ್ಷದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಎತ್ತುಗಳು ನಾಮುಂದು, ತಾಮುಂದು ಎಂದು ಓಡುತ್ತಿದ್ದರೆ ಸ್ಪರ್ಧೆ ಪ್ರಿಯರು ಈ ದೃಶ್ಯವನ್ನು ನೋಡಿ ಖುಷಿ ಪಟ್ಟರು.
ನಾನಾ ಕೆಡೆಗಳಿಂದ ಸ್ಪರ್ಧೆಗೆ ಬಂದಿದ್ದ ಎತ್ತುಗಳನ್ನು ನೋಡಲು ಗ್ರಾಮದ ಜನ ಸೇರಿದ್ದರು. ಶುರುವಿನಿಂದ ಎಂಡ್ ಪಾಯಿಂಟ್ವರೆಗೂ ಜೋಡೆತ್ತಿನ ಸ್ಪರ್ಧೆಯನ್ನು ನೋಡಿದ ಪ್ರೇಕ್ಷಕರು ಸಖತ್ ಎಂಜಾಯ್ ಮಾಡಿದರು.
ಇದನ್ನೂ ಓದಿ: ಮಂಗಳೂರು: ಮಳೆಗಾಲದಲ್ಲಿ ಮನೆ ಮನೆಗಳಲ್ಲಿ ಯಕ್ಷಗಾನದ ರಂಗು