ETV Bharat / state

ಚಿಕ್ಕಮಗಳೂರು: ಗೋಮಾಂಸ ತಯಾರಿಕಾ ಅಡ್ಡೆಗಳಿಗೆ ಜೆಸಿಬಿ ಬಿಸಿ, ನಗರಸಭೆ ಕಠಿಣ ಕ್ರಮ - ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್​ ಸದ್ದು

ನಿಷೇಧಿತ ಸ್ಫೋಟಕ, ಮಾದಕ ವಸ್ತುಗಳು ಸೇರಿದಂತೆ ಗೋಹತ್ಯೆ ಮಾಡಿದರೆ, ನಿಯಮಾನುಸಾರವಾಗಿ ಕಟ್ಟಡ ನೆಲಸಮ ಮಾಡಲಾಗುವುದು ಎಂಬ ನೋಟಿಸ್‌ ಅನ್ನು ಚಿಕ್ಕಮಗಳೂರು ನಗರಸಭೆ ​ಅಂಟಿಸಿದೆ.

Bulldozer sounds in Chikkamaoor
ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್​ ಸದ್ದು
author img

By

Published : Jun 15, 2022, 5:56 PM IST

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕ್ಷೇತ್ರದಲ್ಲಿ ಬುಲ್ಡೋಜರ್ ಸದ್ದು ಮಾಡುತ್ತಿದೆ. ಅಕ್ರಮವಾಗಿ ಗೋಮಾಂಸ ಸಂಗ್ರಹ ಮಾಡುವ ಅಡ್ಡೆಗಳ ಮೇಲೆ ಚಿಕ್ಕಮಗಳೂರು ನಗರಸಭೆ ದಾಳಿ ಮಾಡಿ ಕಟ್ಟಡಗಳನ್ನು ನೆಲಸಮಗೊಳಿಸುತ್ತಿದೆ. ಗೋಮಾಂಸ ಮಾರಾಟ ಮಾಡುತ್ತಿರುವ ಮನೆಗಳಿಗೆ ನೋಟಿಸ್ ನೀಡಲಾಗುತ್ತಿದೆ. ಈ ಮೂಲಕ ನಗರಸಭೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ನಿಷೇಧಿತ ಸ್ಫೋಟಕ, ಮಾದಕ ವಸ್ತುಗಳು ಸೇರಿದಂತೆ ಗೋಹತ್ಯೆ ಮಾಡಿದರೆ, ನಿಯಮಾನುಸಾರವಾಗಿ ಕಟ್ಟಡ ನೆಲಸಮ ಮಾಡಲಾಗುವುದು ಎಂಬ ನೋಟಿಸ್‌ ಅನ್ನು ಚಿಕ್ಕಮಗಳೂರು ನಗರಸಭೆ ​ಅಂಟಿಸಿದೆ. ಕಳೆದ ವಾರ ಗೋಮಾಂಸ ಅಡ್ಡೆಯನ್ನು ಜೆಸಿಬಿ ಮೂಲಕ ನಗರಸಭೆ ನೆಲಸಮ ಮಾಡಲಾಗಿತ್ತು. ಈಗ ಮತ್ತೊಮ್ಮೆ ನೋಟಿಸ್ ನೀಡುವುದರ ಮೂಲಕ ಕಠಿಣ ಕ್ರಮ ಜರಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣು ಗೋಪಾಲ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಕೆಲ ಹಿಂದೂ ಪರ ಸಂಘಟನೆಗಳು ನಗರಸಭೆಗೆ ಮನವಿ ಮಾಡಿವೆ. ನಗರದಲ್ಲಿ ಸಾಕಷ್ಟು ಅಕ್ರಮ ಕಸಾಯಿಖಾನೆಗಳಿವೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ನಗರದ ತಮಿಳು ಕಾಲೋನಿಯಲ್ಲಿನ ಅಕ್ರಮ ಗೋಮಾಂಸ ಅಡ್ಡೆಗಳ ಮೇಲೆ ದಾಳಿ ಮಾಡಿ, ಜೆಸಿಬಿ ಮೂಲಕ ಅಕ್ರಮ ಶೆಡ್​ಗಳ ನೆಲಸಮ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಹುಲಿಗಳ ಹಿಂಡಿನ ಮಧ್ಯೆ ಶ್ವಾನದ ರಾಜಾರೋಷ ಹೇಗಿದೆ ನೋಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.