ಚಿಕ್ಕಮಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರಿಗೆ ಉಜ್ವಲವಾದ ಭವಿಷ್ಯವಿದೆ. ಆದರೆ ಅದು ರಾಜಕಾರಣದಲ್ಲಿ ಅಲ್ಲ, ರನ್ನಿಂಗ್ ರೇಸ್ನಲ್ಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಟಾಂಗ್ ಕೊಟ್ಟರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೆಹಲಿಯಲ್ಲಿ ಪೊಲೀಸರ ಕಣ್ತಪ್ಪಿಸಿ ಶ್ರೀನಿವಾಸ್ ಓಡುವುದನ್ನು ನಾನು ನೋಡ್ತಿದ್ದೆ. ಕ್ಷಣಮಾತ್ರದಲ್ಲಿ ಮಿಂಚಿನ ಓಟಕಿತ್ತರು. ಯಾವುದಾದರೂ ಅಥ್ಲೆಟಿಕ್ಸ್ಗೆ ಹೋದರೆ ಅವರಿಗೆ ಪ್ರಶಸ್ತಿ ಖಂಡಿತ ಎಂದು ಲೇವಡಿ ಮಾಡಿದರು.
ನಾನು ಚಳವಳಿಗಳನ್ನು ಮಾಡಿದ್ದಾನೆ. ಚಳವಳಿ ಮೂಲಕವೇ ಬಂದು ಜೈಲಿಗೆ ಹೋಗಿದ್ದೇನೆ. ಹತ್ತಾರು ಪೊಲೀಸ್ ಸ್ಟೇಷನ್ಗಳಲ್ಲಿ ಓದೆ ತಿಂದಿದ್ದೇನೆ. ಆದರೆ, ಪೊಲೀಸರಿಗೆ ಬೆನ್ನು ತೋರಿಸಿ ಓಡಿ ಹೋಗಿಲ್ಲ. ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವ ಕಳ್ಳರಿಗೆ ಶ್ರೀನಿವಾಸ್ ಮಾದರಿ ಎಂದು ಇದೇ ವೇಳೆ ಕಾಲೆಳೆದರು.
ಇದನ್ನೂ ಓದಿ: ಪ್ರತಿಭಟನೆ ವೇಳೆ ಡಿಕೆ ಸುರೇಶ್ ತಳ್ಳಿ ವ್ಯಾನ್ ಹತ್ತಿಸಿದ ಪೊಲೀಸರು