ETV Bharat / state

ದೇಸಿ ಹಸು ಕಳುಹಿಸಲು ನಾವ್ ರೆಡಿ, ಸಾಕೋಕೆ ನೀವ್ ರೆಡಿನಾ: ಮಧ್ವರಾಜ್​ಗೆ ಬಿಜೆಪಿ ಮುಖಂಡನ ಪ್ರಶ್ನೆ - ರವಿಕಾಂತ್

ಮಧ್ವರಾಜ್ ಅವರ ಬಳಿ ದೇಸಿ ತಳಿ ಇಲ್ಲದಿದ್ದರೇ ನಾವು ಕಳಿಸೋಕೆ ರೆಡಿ. ಅವರು ಸಾಕೋಕೆ ರೆಡಿಯಾ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ಗೆ ಬಿಜೆಪಿ ಮುಖಂಡ ರವಿಕಾಂತ್ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಮುಖಂಡ
author img

By

Published : Apr 4, 2019, 3:04 AM IST

ಚಿಕ್ಕಮಗಳೂರು: ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಪ್ರಚಾರ ನಡೆಸುವ ವೇಳೆ ಗೋವುಗಳ ಕುರಿತು ಹೇಳಿಕೆ ನೀಡಿದ್ದ ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್​ಗೆ ಬಿಜೆಪಿ ಮುಖಂಡ ತಿರುಗೇಟು ನೀಡಿದ್ದಾರೆ.

ಜರ್ಸಿ ಅನ್ನೋದು ಹಂದಿ ಹಾಗೂ ಸಿಂದಿಯ ಅಂಶದಿಂದ ಬಂದದ್ದು. ವ್ಯವಹಾರಿಕವಾಗಿ ಹಣ ಗಳಿಸುವ ದೃಷ್ಠಿಯಿಂದ ಹಸುಗಳನ್ನು ಸಾಕೋದು ದೊಡ್ಡದಲ್ಲ. ದೇಸಿ ತಳಿಗಳನ್ನು ಸಾಕುವ ಜವಾಬ್ದಾರಿ ಇದ್ದು, ಮಧ್ವರಾಜ್ ಅವರ ಬಳಿ ದೇಸಿ ತಳಿ ಇಲ್ಲದಿದ್ದರೇ ನಾವು ಕಳಿಸೋಕೆ ರೆಡಿ. ಅವರು ಸಾಕೋಕೆ ರೆಡಿಯಾ ಎಂದು ಪ್ರಮೋದ್ ಮಧ್ವರಾಜ್‍ಗೆ ಬಿಜೆಪಿ ಮುಖಂಡ ರವಿಕಾಂತ್ ಪ್ರಶ್ನೆ ಮಾಡುವುದರ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಮಧ್ವರಾಜ್​ ಹೇಳಿಕೆಗೆ ಬಿಜೆಪಿ ಮುಖಂಡ ತಿರುಗೇಟು

ಕೊಪ್ಪದಲ್ಲಿ ಮಾತನಾಡಿರೋ ರವಿಕಾಂತ್, ಪ್ರಮೋದ್ ಅವರು ಗೋಮಾತೆ ಬಗ್ಗೆ ಆಸಕ್ತಿದಾಯಕವಾಗಿ ಪ್ರಶ್ನೆ ಎತ್ತಿರೋದು ಸಂತೋಷ. ಎಷ್ಟು ಜನ ಬಿಜೆಪಿ ಹಾಗೂ ಸಂಘಪರಿವಾರದವರು ದನ ಸಾಕಿದ್ದಾರೆ. ಇಂದು ಹಾಲನ್ನು ವ್ಯವಹಾರಿಕವಾಗಿ ನೋಡಲಾಗುತ್ತಿದೆ. ನಾವು ಗೌರವಿಸೋದು ದೇಸಿಯ ತಳಿಗಳಾದ ಮಲೆನಾಡು ಗಿಡ್ಡ ಹಾಗೂ ಹಳ್ಳಿಕಾರ್ ತಳಿಗಳನ್ನು. ಪ್ರಮೋದ್ ಅವರಿಗೆ ಈ ತಳಿಗಳನ್ನು ಸಾಕುವ ಆಸಕ್ತಿ ಇದ್ದರೆ, ಅವರ ಬಳಿ ಈ ತಳಿಗಳು ಇಲ್ಲವಾದರೇ ನಾವು ಕಳಿಸಿಕೊಡೋದಕ್ಕೆ ರೆಡಿ ಇದ್ದೇವೆ. ನೀವು ಸಾಕೋದಕ್ಕೆ ರೆಡಿ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.