ETV Bharat / state

ಮತ್ತೆ ಕಾಡುಕೋಣ ಪ್ರತ್ಯಕ್ಷ... ಭಯದ ನೆರಳಲ್ಲಿ ಮಲೆನಾಡಿನ ಜನ - Kannada news

ಮೂಡಿಗೆರೆ ತಾಲೂಕಿನ ಚೌಳಿಕೆರೆ ಕಾಫಿ ಎಸ್ವೇಟ್ ಬಳಿ ಬೆಳ್ಳಂ ಬೆಳಗ್ಗೆ ಗ್ರಾಮದತ್ತ ರಾಜಾರೋಷವಾಗಿ ಮುಖ್ಯ ದಾರಿಯಲ್ಲಿಯೇ ನಡೆದು ಬಂದಿದೆ.

ಕಾಡುಕೋಣ ಪ್ರತ್ಯಕ್ಷ
author img

By

Published : Jun 7, 2019, 5:28 PM IST

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮತ್ತೆ ಬೃಹತ್ ಗಾತ್ರದ ಕಾಡು ಕೋಣ ಕಾಣಿಸಿಕೊಂಡಿದೆ. ಮೂಡಿಗೆರೆ ತಾಲೂಕಿನ ಚೌಳಿಕೆರೆ ಕಾಫಿ ಎಸ್ವೇಟ್ ಬಳಿ ಇವತ್ತು ಕಾಣಿಸಿಕೊಂಡ ಕಾಡು ಕೋಣ ಚೌಳಿಕೆರೆ ಗ್ರಾಮದತ್ತ ಸಾಗುವ ಮುಖ್ಯ ರಸ್ತೆಯಲ್ಲೇ ರಾಜಾರೋಷವಾಗಿ ನಡೆದು ಬಂದಿದೆ. ಪ್ರತಿನಿತ್ಯ ಕಾಡುಕೋಣಗಳು ಮಲೆನಾಡು ಭಾಗದ ಗ್ರಾಮ ದತ್ತ ಧಾವಿಸಿ ಬರುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಲೆನಾಡು ಭಾಗದಲ್ಲಿ ಜನರು ರಸ್ತೆಯಲ್ಲಿ ಸಂಚಾರ ಮಾಡೋದಕ್ಕೂ ಹಿಂದೇ ಮುಂದೆ ನೋಡುವಂತಹ ಸ್ಥಿತಿ ನಿರ್ಮಾಣ ಆಗುತ್ತಿದ್ದು, ಗ್ರಾಮದ ಬಳಿಯೇ ಈ ರೀತಿಯಾಗಿ ಕಾಣಿಸಿಕೊಳ್ಳುತ್ತಿರೋದು ಭಯ ಹುಟ್ಟಿಸುತ್ತಿದೆ. ಪದೇ ಪದೇ ಹೀಗೆ ಕಾಡು ಕೋಣಗಳು ಕಾಣಿಸಿಕೊಳ್ಳುತ್ತಿರುವುದನ್ನು ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಅನ್ನೋದು ಇವರ ಆರೋಪವಾಗಿದೆ.

Intro:R_Kn_Ckm_03_07_Kaademme_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಮತ್ತೆ ಬೃಹತ್ ಗಾತ್ರದ ಕಾಡು ಕೋಣ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಈ ಕಾಡುಕೋಣ ಪ್ರತ್ಯಕ್ಷವಾಗಿದ್ದು ಮೂಡಿಗೆರೆಯ ಚೌಳಿಕೆರೆ ಕಾಫೀ ಎಸ್ವೇಟ್ ಬಳಿ ಬೆಳ್ಳಂ ಬೆಳಗ್ಗೆ ಗ್ರಾಮದತ್ತ ರಾಜರೋಷವಾಗಿ ಮುಖ್ಯ ದಾರಿಯಲ್ಲಿಯೇ ನಡೆದು ಬಂದಿದೆ. ಪ್ರತಿನಿತ್ಯ ಕಾಡುಕೋಣಗಳು ಮಲೆನಾಡು ಭಾಗದ ಗ್ರಾಮ ದತ್ತ ಧಾವಿಸಿ ಬರುತ್ತಿದ್ದು ಸ್ಥಳೀಯರಲ್ಲಿ ಆತಂಕದ ವಾತವರಣ ನಿರ್ಮಾಣ ಮಾಡುತ್ತಿದೆ. ಇದರಿಂದ ಮಲೆನಾಡು ಭಾಗದಲ್ಲಿ ಜನರು ರಸ್ತೆಯಲ್ಲಿ ಸಂಚಾರ ಮಾಡೋದಕ್ಕೂ ಹಿಂದೇ ಮುಂದೆ ನೋಡುವಂತಹ ಸ್ಥಿತಿ ನಿರ್ಮಾಣ ಆಗುತ್ತಿದ್ದು ಗ್ರಾಮದ ಬಳಿಯೇ ಈ ರೀತಿಯಾಗಿ ಕಾಣಿಸಿಕೊಳ್ಳುತ್ತಿರೋದು ಭಯ ಹುಟ್ಟಿಸುತ್ತಿದೆ.ಪದೇ ಪದೇ ರೀತಿಯಾಗಿ ಕಾಡು ಕೋಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನಲೆ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೇ ತಂದರೂ ಯಾವುದೇ ಪ್ರಯೋಜನ ಆಗಿಲ್ಲ.ಇದರಿಂದ ಗ್ರಾಮಸ್ಥರು ಜೀವ ಭಯದಿಂದಲೇ ಪ್ರತಿನಿತ್ಯ ಬದುಕು ನಡೆಸುವಂತಾಗಿದೆ.....

Conclusion:ರಾಜಕುಮಾರ್,,,,,,
ಈ ಟಿವಿ ಭಾರತ್,,,,,,,
ಚಿಕ್ಕಮಗಳೂರು.........
ETV Bharat Logo

Copyright © 2025 Ushodaya Enterprises Pvt. Ltd., All Rights Reserved.