ETV Bharat / state

ಮುರಿದು ಬೀಳುವ ಸ್ಥಿತಿಯಲ್ಲಿದೆ ಬಂಕೇನಹಳ್ಳಿ ಕಾಲುಸಂಕ

author img

By

Published : Mar 7, 2021, 3:47 PM IST

2019 ರ ಆಗಸ್ಟ್ ತಿಂಗಳು ಸುರಿದ ಜಡಿ ಮಳೆಗೆ ಈ ಸೇತುವೆ ಹಾಳಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿಗೆ ಘೇರಾವ್ ಹಾಕಿದ ಮೇಲೆ ಕಬ್ಬಿಣದ ತಾತ್ಕಾಲಿಕ ಕಾಲುಸಂಕ ಹಾಕಿ ಶೀಘ್ರವೇ ಸೇತುವೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದರು.

Bankenahalli Bridge
ಮುರಿದು ಬೀಳುವ ಸ್ಥಿತಿಯಲ್ಲಿ ಕಾಲುಸಂಕ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಸೇತುವೆ ರಣಮಳೆಗೆ ಕೊಚ್ಚಿ ಹೋಗಿತ್ತು. ಅಂದಿನಿಂದ ಸೇತುವೆಗಾಗಿ ಸ್ಥಳೀಯರು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮುರಿದು ಬೀಳುವ ಸ್ಥಿತಿಯಲ್ಲಿ ಕಾಲುಸಂಕ

ಈ ಬಗ್ಗೆ ರಾಜ್ಯದ ಬಹುತೇಕ ಎಲ್ಲಾ ಮಂತ್ರಿಗಳು ಬಂದು ಪರಿಶೀಲನೆ ನಡೆಸಿದರೂ ಪ್ರಯೋಜನ ಆಗಿಲ್ಲ. ಮಳೆ ಬಂದಾಗೆಲ್ಲ ನೀರು ವೇಗವಾಗಿ ಹರಿದರೆ ಸಿಮೆಂಟ್ ಪೈಪ್ ಮೇಲೆ ಕೊಟ್ಟಿರುವ ಸಪೋರ್ಟಿಂಗ್ ಪಿಲ್ಲರ್ ಮುರಿದು ಬೀಳುವ ಆತಂಕವಿದೆ. 2019 ರ ಆಗಸ್ಟ್ ತಿಂಗಳು ಸುರಿದ ಜಡಿ ಮಳೆಗೆ ಈ ಸೇತುವೆ ಹಾಳಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿಗೆ ಘೇರಾವ್ ಹಾಕಿದ ಮೇಲೆ ಕಬ್ಬಿಣದ ತಾತ್ಕಾಲಿಕ ಕಾಲುಸಂಕ ಹಾಕಿ ಶೀಘ್ರವೇ ಸೇತುವೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಮಣ್ಣು ಕುಸಿದರೆ ಕಾಲುಸಂಕಕ್ಕೆ ಗ್ರಿಪ್ ಇರಲ್ಲ. ಈ ಕಾಲುಸಂಕದ ಮೇಲೆ ಜನರು ಭಯದಿಂದಲೇ ಓಡಾಡುವ ಪರಿಸ್ಥಿತಿಯಿದೆ. ಇದರ ಮೇಲೆ ನಡೆಯುವಾಗ ಬರುವ ಶಬ್ದ ಹಳ್ಳಿಗರನ್ನು ಮತ್ತಷ್ಟು ಕಂಗಾಲಾಗಿಸಿದೆ. ಈ ಸೇತುವೆಯನ್ನು ಎಂಟಕ್ಕೂ ಹೆಚ್ಚು ಹಳ್ಳಿಯ ಜನ ಅವಲಂಬಿಸಿದ್ದಾರೆ. ಈ ಸಂಕವೂ ಕೊಚ್ಚಿ ಹೋದರೆ ಅವರ ಬದುಕು ಮತ್ತಷ್ಟು ಅತಂತ್ರವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.