ಚಿಕ್ಕಮಗಳೂರು: 9 ಲಕ್ಷ ಮುಂಗಡ ನೀಡಿದ್ದ ಹಣ ವಾಪಸ್ ಕೊಡದ ಹಿನ್ನಲೆ ತೋಟದ ಮಾಲೀಕ, ಕಾರ್ಮಿಕರನ್ನ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರದಲ್ಲಿ ನಡೆದಿದೆ.
ಕಾಫಿ ತೋಟದ ಕೆಲಸಕ್ಕೆ ಸೇರುವಾಗ ಕಾರ್ಮಿಕರಿಗೆ ಮುಂಗಡವಾಗಿ ಮಾಲೀಕ 9 ಲಕ್ಷ ಹಣ ನೀಡಿದ್ದ. ಕಾರ್ಮಿಕರು ಬೇರೆಡೆ ಕೆಲಸಕ್ಕೆ ಹೋಗುತ್ತೇವೆ ಎಂದಾಗ ತೋಟದ ಮಾಲೀಕ ಹಣ ವಾಪಸ್ ಕೇಳಿದ್ದಾನೆ. ಸಮಯ ನೀಡಿ ಹಣ ಕಟ್ಟಿ ಹೋಗುತ್ತೇವೆ ಎಂದರೂ ಕಾರ್ಮಿಕರ ಮೇಲೆ ಮಾಲೀಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
-
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ 14 ದಲಿತ ಕಾರ್ಮಿಕ ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿರುವ, ಗರ್ಭಿಣಿ ಮಹಿಳೆಗೆ ಹಲ್ಲೆ ಮಾಡುವ ವಿಡಿಯೋ ಹರಿದಾಡುತ್ತಿದೆ.
— Karnataka Congress (@INCKarnataka) October 11, 2022 " class="align-text-top noRightClick twitterSection" data="
ಅಲ್ಲದೇ ರಾಜಕೀಯ ಒತ್ತಡದಿಂದ ಕೇಸ್ ಮುಚ್ಚಿ ಹಾಕಲು ಯತ್ನಿಸಲಾಗಿದೆ ಎಂದು ವರದಿಯಾಗಿದೆ. ಸರ್ಕಾರ ಈ ಕೂಡಲೇ ಈತನ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು.@CMofKarnataka pic.twitter.com/YblcEKDQJM
">ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ 14 ದಲಿತ ಕಾರ್ಮಿಕ ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿರುವ, ಗರ್ಭಿಣಿ ಮಹಿಳೆಗೆ ಹಲ್ಲೆ ಮಾಡುವ ವಿಡಿಯೋ ಹರಿದಾಡುತ್ತಿದೆ.
— Karnataka Congress (@INCKarnataka) October 11, 2022
ಅಲ್ಲದೇ ರಾಜಕೀಯ ಒತ್ತಡದಿಂದ ಕೇಸ್ ಮುಚ್ಚಿ ಹಾಕಲು ಯತ್ನಿಸಲಾಗಿದೆ ಎಂದು ವರದಿಯಾಗಿದೆ. ಸರ್ಕಾರ ಈ ಕೂಡಲೇ ಈತನ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು.@CMofKarnataka pic.twitter.com/YblcEKDQJMಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ 14 ದಲಿತ ಕಾರ್ಮಿಕ ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿರುವ, ಗರ್ಭಿಣಿ ಮಹಿಳೆಗೆ ಹಲ್ಲೆ ಮಾಡುವ ವಿಡಿಯೋ ಹರಿದಾಡುತ್ತಿದೆ.
— Karnataka Congress (@INCKarnataka) October 11, 2022
ಅಲ್ಲದೇ ರಾಜಕೀಯ ಒತ್ತಡದಿಂದ ಕೇಸ್ ಮುಚ್ಚಿ ಹಾಕಲು ಯತ್ನಿಸಲಾಗಿದೆ ಎಂದು ವರದಿಯಾಗಿದೆ. ಸರ್ಕಾರ ಈ ಕೂಡಲೇ ಈತನ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು.@CMofKarnataka pic.twitter.com/YblcEKDQJM
ಘಟನೆಯ ವಿಡಿಯೋ ಮಾಡಿದ್ದಕ್ಕೆ ಗರ್ಭಿಣಿ ಮೇಲೂ ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ನ್ಯಾಯ ಸಿಗುತ್ತಿಲ್ಲ ಎಂದು ಕಾರ್ಮಿಕ ಕುಟುಂಬಗಳು ಹೇಳುತ್ತಿವೆ. ಒಟ್ಟು 6 ಕಾರ್ಮಿಕ ಕುಟುಂಬದಿಂದ ಈ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ತಾಯಿಯಿಲ್ಲದ 10 ತಿಂಗಳ ಮಗು ತಂದೆಗೆ ಹಸ್ತಾಂತರಿಸಲು ಹೈಕೋರ್ಟ್ ನಕಾರ.. ಏನಿದು ಪ್ರಕರಣ?