ETV Bharat / state

ಮಹಿಳೆಗೆ ಚುಡಾಯಿಸಿದ ಆರೋಪ.. ಸ್ಥಳೀಯರಿಂದ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ

ಜಿಲ್ಲೆಯ ಕಂಬಿಹಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಚುಡಾಯಿಸಿದ್ದಾರೆ ಎಂದು ಆರೋಪಿಸಿ ಕೆಲ ಸ್ಥಳೀಯರು ಪರಿಸರವಾದಿ ಡಿ.ವಿ.ಗಿರೀಶ್ ಹಾಗೂ ಅವರ ಸ್ನೇಹಿತರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Assaulted by locals on Environmentalist DV Girish
ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ
author img

By

Published : Aug 31, 2021, 6:52 PM IST

Updated : Sep 2, 2021, 7:33 PM IST

ಚಿಕ್ಕಮಗಳೂರು: ಮಹಿಳೆಗೆ ಚುಡಾಯಿಸಿದರೆಂದು ಆರೋಪಿಸಿ ಪರಿಸರವಾದಿ ವೈಲ್ಡ್ ಕ್ಯಾಟ್ - ಸಿ ಸಂಸ್ಥೆಯ ಡಿ.ವಿ.ಗಿರೀಶ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಿಲ್ಲೆಯ ಕಂಬಿಹಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಚುಡಾಯಿಸಿದ್ದಾರೆ ಎಂದು ಆರೋಪಿಸಿ ಕೆಲ ಸ್ಥಳೀಯರು ಡಿ.ವಿ.ಗಿರೀಶ್ ಹಾಗೂ ಅವರ ಸ್ನೇಹಿತರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವರ ಜೊತೆಯಲ್ಲಿದ್ದವರಿಗೂ ಥಳಿಸಿದ್ದಾರೆ ಎಂದು ಕೆಲ ಸ್ಥಳೀಯರು ಹೇಳುತ್ತಿದ್ದಾರೆ.

ಸ್ಥಳೀಯರಿಂದ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ

ಇನ್ನೂ ಕೆಲ ಗ್ರಾಮಸ್ಥರ ಪ್ರಕಾರ, ಕೆಲ ಯುವಕರು ಸಂತವೇರಿ ಘಾಟಿಯಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ, ವಾಹನದಲ್ಲಿ ಬಂದ ಗಿರೀಶ್ ಮತ್ತವರ ಸಂಗಡಿಗರು ಯುವಕರತ್ತ ಕೈ ತೋರಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ವಾಹನ ಅಡ್ಡಗಟ್ಟಿ ಗಿರೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: WATCH: ಬಂಡೀಪುರ ರೆಸಾರ್ಟ್​ನಲ್ಲಿ ಓಡಾಡಿ ಕಾಡಿಗೆ ಮರಳಿದ ಚಿರತೆ

Last Updated : Sep 2, 2021, 7:33 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.