ಚಿಕ್ಕಮಗಳೂರು: ಚಿಕ್ಕಮಗಳೂರಿನ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಅಕ್ಷರ ತೋರಣ ಪತ್ರಿಕೆಯ ಸಂಪಾದಕ ಪಿ. ರಾಜೇಶ್ ಹಲ್ಲೆಗೊಳಗಾದವರು. ನಗರದ ಎಐಟಿ ವೃತ್ತದ ರಸ್ತೆ ಬದಿ ಅಂಗಡಿಗಳನ್ನು ನಗರಸಭೆಯ ನೌಕರರು, ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಅಂಗಡಿ ಮಾಲೀಕರಿಗೆ ಅಲ್ಲಿರುವ ವಸ್ತುಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಿಲ್ಲ. ಈ ವೇಳೆ ರಾಜೇಶ್ ವಶಪಡಿಸಿಕೊಂಡ ಎಲ್ಲ ವಸ್ತುಗಳನ್ನು ಮಾಲೀಕರಿಗೆ ವಾಪಸ್ ನೀಡುವಂತೆ ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದರು. ಈ ವಿಚಾರವನ್ನು ತಿಳಿದ ಇಬ್ಬರು ವ್ಯಕ್ತಿಗಳು, ರಾತ್ರೋರಾತ್ರಿ ರಾಜೇಶ್ ಅವರ ಮನೆಗೆ ನುಗ್ಗಿ, ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ, ಹಲ್ಲೆಗೊಳಗಾದ ಪತ್ರಕರ್ತ ರಾಜೇಶ್ ಅವರ ಬಳಿ ಮಾಹಿತಿ ಪಡೆದುಕೊಂಡಿರುವ ಡಿವೈಎಸ್ಪಿ ಆರೋಪಿಗಳ ಮೇಲೆ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಚಿಕ್ಕಮಗಳೂರು ಪ್ರೆಸ್ ಕ್ಲಬ್ ನ ಸದಸ್ಯರು ಜಿಲ್ಲಾಧಿಕಾರಿ, ಎಸ್ಪಿ, ನಗರಸಭೆ ಆಯುಕ್ತರು ಭೇಟಿಯಾಗಿ ಮನವಿ ಸಲ್ಲಿಸಿ, ಪತ್ರಕರ್ತ ರಾಜೇಶ್ ಅವರಿಗೆ ನ್ಯಾಯ ಸುವಂತೆ ಮನವಿ ಮಾಡಿದ್ದಾರೆ.