ETV Bharat / state

ಗ್ರಾಮದ ಸಮಸ್ಯೆ ಬಗೆಹರಿಸಿ.. ಸಿಎಂಗೆ ಪತ್ರ ಬರೆದ ಅನಗೋಡು ಗ್ರಾಮಸ್ಥರು..

author img

By

Published : Nov 12, 2021, 6:28 PM IST

ರಸ್ತೆ ನಿರ್ಮಿಸುವಂತೆ ಹಾಗೂ ನೆಟ್​​ವರ್ಕ್​ ಸಮಸ್ಯೆ ಬಗೆಹರಿಸುವಂತೆ ಕೋರಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅನಗೋಡು ಗ್ರಾಮಸ್ಥರು ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಅವರಿಗೆ ಬರೆದಿದ್ದಾರೆ..

ರಸ್ತೆ ದುರಸ್ಥಿಗೆ ಆಗ್ರಹಿಸಿದ ಅನಗೋಡು ಗ್ರಾಮಸ್ಥರು

ಚಿಕ್ಕಮಗಳೂರು : ರಸ್ತೆ ನಿರ್ಮಿಸುವಂತೆ ಹಾಗೂ ನೆಟ್​​ವರ್ಕ್​ ಸಮಸ್ಯೆ ಬಗೆಹರಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) ಅವರಿಗೆ ಚಿಕ್ಕಮಗಳೂರಿನ ಜನರು ಪತ್ರ ಬರೆದಿದ್ದಾರೆ.

ಸಿಎಂಗೆ ಪತ್ರ
ಸಿಎಂಗೆ ಪತ್ರ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅನಗೋಡು ಗ್ರಾಮಸ್ಥರು (Anagodu villagers) ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಈ ಗ್ರಾಮದ ಬಗ್ಗೆ ಶಾಸಕರು, ಅಧಿಕಾರಿಗಳು ಹಾಗೂ ಜಿಪಂ, ತಾಪಂ ಸದಸ್ಯರು ಸ್ಪಂದಿಸುತ್ತಿಲ್ಲ.

ಜನರು, ಮಕ್ಕಳ ಓಡಾಟಕ್ಕೂ ತೀವ್ರ ಸಮಸ್ಯೆಯಾಗಿದೆ. ರಸ್ತೆಗೆ ಜಲ್ಲಿ ಹಾಕಿ ಹೋದವರು ಮತ್ತೆ ಈ ಕಡೆ ಬಂದಿಲ್ಲ. ವಾಹನ ಓಡಾಡುವಂತಿಲ್ಲ. ಜತೆಗೆ ಕುಡಿಯುವ ನೀರಿಲ್ಲ. ಹೀಗೆ ಗ್ರಾಮದಲ್ಲಿ ಹತ್ತಾರು ಸಮಸ್ಯೆಗಳಿವೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ನಮ್ಮ ಕಷ್ಟಕ್ಕೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ನೀವಾದರೂ ನಮ್ಮ ಕಷ್ಟಕ್ಕೆ ಸ್ಪಂದಿಸಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ, ಮುಂದಿನ ಎಲ್ಲಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಅನಗೋಡು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿಗೆ ಜಗದೀಶ್‌ ಶೆಟ್ಟರ್ ದೌಡು.. ಬಿಜೆಪಿ ಪಾಳಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.