ಚಿಕ್ಕಮಗಳೂರು: ಪರಿಸರವಾದಿ ಡಿ.ವಿ. ಗಿರೀಶ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ಖಂಡನೀಯ ಎಂದಿರುವ ಅವರು, ಬಾಲಕಿ ಮೇಲೆ ಆಗಿರಬಹುದಾದ ಮಾನಸಿಕ ಘಾಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.ವಿ. ಗಿರೀಶ್ ಮತ್ತು ಅವರ ಗೆಳೆಯರ ಮೇಲೆ ಹಲ್ಲೆ ಆದ ವಿಚಾರವನ್ನು ನೋಡಿದೆ. ಪುಂಡರ ಗುಂಪೊಂದು ಇವರ ಮೇಲೆ ಹಲ್ಲೆ ನಡೆಸುವಾಗ 17 ವರ್ಷದ ಬಾಲಕಿ ಅಸಹಾಯಕವಾಗಿ ಎಲ್ಲವನ್ನೂ ವಾಹನದಿಂದಲೇ ನೋಡುತ್ತಿದ್ದಳು. ಇದು ಬಾಲಕಿಯ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ. ಮಾನಸಿಕವಾಗಿ ಆಕೆಗೆ ಎಷ್ಟು ಘಾಸಿ ಆಗಿರಬಹುದು. ಆ ದುಷ್ಟರು ಅರೆಸ್ಟ್ ಆಗಬೇಕು. ಕಾನೂನಿನ ಬಗ್ಗೆ ಜನರಿಗೆ ಭಯವಿಲ್ಲವೇ? ಬೇರೆ ಮುನುಷ್ಯರ ಬಗ್ಗೆ ಗೌರವ ಇಲ್ಲವೇ?ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿರಿ: ಪರಿಸರವಾದಿ ಡಿ.ವಿ. ಗಿರೀಶ್ ಮೇಲೆ ಹಲ್ಲೆ ಪ್ರಕರಣ: ಏಳು ಜನರ ಬಂಧನ
ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು, ಪರಿಸರವಾದಿ ಡಿ.ವಿ. ಗಿರೀಶ್ ಅವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಸದ್ಯ ರಾಜಕೀಯ ಹಾಗೂ ಸಿನಿಮಾ ರಂಗದಿಂದ ದೂರ ಉಳಿದಿರುವ ರಮ್ಯಾ, ಮನೆಯಲ್ಲಿ ತಮ್ಮ ಮುದ್ದಿನ ಶ್ವಾನಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಸ್ನೇಹಿತರ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ರಿಯಾಕ್ಟ್ ಮಾಡುವ ಮೂಲಕ, ಮೇಲಿಂದ ಮೇಲೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ದೌರ್ಬಲ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿಬಿಡುತ್ತಿರುತ್ತಾರೆ.