ETV Bharat / state

ಯುವತಿ ಜೊತೆ ಸ್ನೇಹ ಬೆಳಸಿದ್ದಕ್ಕೆ ಯುವಕನ ಮೇಲೆ ಯುವಕರ ಗುಂಪು ಹಲ್ಲೆ ಘಟನೆಗೆ ಟ್ವಿಸ್ಟ್ - ಈಟಿವಿ ಭಾರತ ಕನ್ನಡ

ಚಿಕ್ಕಮಗಳೂರಲ್ಲಿ ಬೆಳಗಿನ ಜಾವ ಯುವಕನ ಮೇಲೆ ಹಲ್ಲೆ ನಡೆದ ಘಟನೆಗೆ ಟ್ವಿಸ್ಟ್​ ಸಿಕ್ಕಿದೆ.

ಯುವಕರ ಗುಂಪು ಹಲ್ಲೆ ಘಟನೆಗೆ ಟ್ವಿಸ್ಟ್
ಯುವಕರ ಗುಂಪು ಹಲ್ಲೆ ಘಟನೆಗೆ ಟ್ವಿಸ್ಟ್
author img

By

Published : May 26, 2023, 10:54 PM IST

Updated : May 26, 2023, 11:03 PM IST

ಯುವಕರ ಗುಂಪು ಹಲ್ಲೆ ಘಟನೆಗೆ ಟ್ವಿಸ್ಟ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೆಳಗ್ಗೆ ಸುಮಾರಿಗೆ ನಡೆದ ಘಟನೆಯಲ್ಲಿ ಯುವತಿಯೊಂದಿಗೆ ಯುವಕ ಸ್ನೇಹ ಬೆಳೆಸಿದ್ದಕ್ಕೆ ಯುವಕರ ಗುಂಪೊಂದು ಹಲ್ಲೆ ಮಾಡಿತ್ತು ಎಂಬ ಸುದ್ದಿಯೊಂದು ನಗರದಲ್ಲಿ ಹರಿದಾಡಿತ್ತು. ಇದೀಗ ಈ ಘಟನೆಗೆ ಟ್ವಿಸ್ಟ್​​ ​ ಸಿಕ್ಕಿದ್ದು ಯಾರು ಇಲ್ಲದ ಹೊತ್ತಿನಲ್ಲಿ ಒಂಟಿ ಮಹಿಳೆ ಇರುವ ಮನೆಗೆ ಬೆಳಗಿನ ಜಾವ 4 ಗಂಟೆಗೆ ಈ ಯುವಕ ತೆರಳಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆ ಮನೆಯಲ್ಲಿ ಏನು ಕೆಲಸ ನಿನಗೆ ಎಂದು ಪ್ರಶ್ನೆ ಮಾಡಿ ಬಳಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಾದ ಯುವಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆದರೆ, ಹಲ್ಲೆಗೊಳಗಾದ ಈ ಯುವಕ ಈ ಬಗ್ಗೆ ಹೇಳುವುದೇ ಬೇರೆಯಾಗಿದ್ದು, ಹಲ್ಲೆ ಮಾಡಿದ ಕೆಲ ಯುವಕರಿಗೂ ನನಗೂ ಹಳೆಯ ವೈಯಕ್ತಿಕ ದ್ವೇಷ ಇತ್ತು. ಹಾಗಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಬಿಡಿಸಲು ಬಂದ ಪೊಲೀಸರ ಮೇಲು ಯುವಕರ ಗುಂಪು ಹಲ್ಲೆ ಮಾಡಿದ್ದಾರೆ. ಅವರಿಗೆ ಕಾನೂನಿನ ಅಡಿ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಆದರೆ, ಈ ಘಟನೆಯನ್ನು ನೋಡಿದ ಕೆಲವರು ಹೇಳುತ್ತಿರುವುದೇ ಬೇರೆ ಯಾಗಿದ್ದು, ಬೆಳಗಿನ ಜಾವ 3 - 3.30 ಸುಮಾರಿಗೆ, ಕೆಲವರು ಕಳ್ಳ ಕಳ್ಳ ಎಂದು ಕಿರುಚಿದ್ದಾರೆ. ಎಲ್ಲರೂ ಮನೆಯಿಂದು ಹೊರಬಂದು ನೋಡಿದಾಗ ಈ ಯುವಕ ಆ ಮಹಿಳೆಯ ಮನೆಯಲ್ಲಿ ಅವಿತು ಕುಳಿತಿದ್ದ, ಆ ಮನೆಯ ಬಳಿ ಹೋಗಿ ಆತನನ್ನು ನಾವು ಆಚೆ ಕರೆದವು ಆತನ ಕೈ ಯಲ್ಲಿ ಚಾಕು ಇತ್ತು. ನಂತರ ನಾವೇ ಮನೆಗೆ ಹೋಗಿ ನೋಡಿದಾಗ, ಅಡುಗೆ ಮನೆಯ ಕಪಾಟಿನಿಂದ ಇಳಿಯುವಾಗ ಆಯ ತಪ್ಪಿ ಬಿದ್ದು ಅವನಿಗೆ ಗಾಯವಾಗಿದೆ.

ಆದರೆ, ನಾವು ಯಾವುದೇ ಕಾರಣಕ್ಕೂ ಆತನಿಗೆ ಹಲ್ಲೆ ಮಾಡಿಲ್ಲ. ಹಿಂದಿನಿಂದಲೂ ಆ ಮನೆಯ ಮಹಿಳೆಗೆ ತೊಂದರೆ ಕೊಡುತ್ತಿದ್ದ. ಈತನ ಕೆಲಸವೇ ಹೆಣ್ಣು ಮಕ್ಕಳಿಗೆ ಟಾರ್ಚರ್ ನೀಡುವುದು. ಹೆಣ್ಣು ಮಕ್ಕಳ ಮೊಬೈಲ್ ನಂಬರ್ ಪಡೆದು ಫೋನ್ ಮಾಡುವುದು. ಈ ಹಿಂದೆ 2 ರಿಂದ 3 ಬಾರಿ ಆತನನ್ನು ಕರೆಯಿಸಿ ತಿಳಿವಳಿಕೆ ಬುದ್ಧಿ ಕೂಡ ಹೇಳಿದ್ದೇವೆ. ಆದರೂ ತಿದ್ದಿ ಕೊಳ್ಳುವ ಪ್ರಯತ್ನ ಆತ ಮಾಡಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಯುವಕನ ಮೇಲೆ ಹಲ್ಲೆ: ಚಿಕ್ಕಬಳ್ಳಾಪುರದಲ್ಲಿ ಯುತಿಯೊಂದಿಗೆ ಯುವಕನೊಬ್ಬ ಹೋಟೆಲ್​ಗೆ​ ಬಂದ, ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿಯ ಹೋಟೆಲ್​ವೊಂದಕ್ಕೆ ಯವತಿಯೊಂದಿಗೆ ಹಲ್ಲೆಗೊಳಗಾದ ಯುವಕ ಬಂದಿರುತ್ತಾನೆ. ಇದನ್ನು ಗಮನಿಸಿದ ಯುವಕರ ಗುಂಪೊಂದು ಯವತಿಯೊಂದಿಗೆ ಬಂದಾತನ ಬಳಿ ತೆರಳಿ ಅವನ ಹಿನ್ನೆಲೆ ಬಗ್ಗೆ ವಿಚಾರಣೆ ನಡೆಸಿ ನಂತರ ಹಲ್ಲೆ ನಡೆಸಿದ್ದಾರೆ. ಇದರ ನಡುವೆ ಯುವತಿ, ಯುವಕನ ರಕ್ಷಣೆಗೆ ಮುಂದಾಗಿದ್ದಾಳೆ. ಆತನ ಮೇಲೆ ಹಲ್ಲೆ ನಡೆಸದಂತೆ ತಡೆಯಲು ಪ್ರಯತ್ನಿಸಿದ್ದಾಳೆ. ಬಳಿಕ ಆ ಗುಂಪು ಯುವತಿಗೆ ಪೋಷಕರ ದೂರವಾಣಿ ಸಂಖ್ಯೆ ಕೊಡುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಬೆದರಿದ ಯುವತಿ ಕ್ಷಮೆಯಾಚಿಸಿದ್ದಾಳೆ. ಇಷ್ಟಾದರೂ ಬಿಡದ ಯುವಕರ ಗುಂಪು ಯುವಕನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ.. ಯವತಿಯೊಂದಿಗೆ ಹೋಟೆಲ್​ಗೆ ತೆರಳಿದ ಯುವಕನ ಮೇಲೆ ಗುಂಪಿಂದ ಹಲ್ಲೆ: ಇಬ್ಬರ ಬಂಧನ

Last Updated : May 26, 2023, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.