ETV Bharat / state

ಚಿಕ್ಕಮಗಳೂರು: ರಸ್ತೆಯಲ್ಲೇ ಮಲಗಿದ ವ್ಯಕ್ತಿ, ವಾಹನ ಸವಾರರಿಗೆ ಕಿರಿಕಿರಿ

ವ್ಯಕ್ತಿಯೊಬ್ಬ ರಸ್ತೆಯಲ್ಲಿ ಮಲಗಿ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

road middle  road middle  problem for motorists  ರಸ್ತೆ ಮಧ್ಯೆ ಮಲಗಿದ ವ್ಯಕ್ತಿ  ವಾಹನ ಸವಾರರಿಗೆ ಕಿರಿಕಿರಿ
ರಸ್ತೆ ಮಧ್ಯೆ ಮಲಗಿದ ವ್ಯಕ್ತಿ
author img

By ETV Bharat Karnataka Team

Published : Jan 12, 2024, 8:11 AM IST

ರಸ್ತೆ ಮಧ್ಯೆ ಮಲಗಿದ ವ್ಯಕ್ತಿ

ಚಿಕ್ಕಮಗಳೂರು: ವ್ಯಕ್ತಿಯೊಬ್ಬ ರಸ್ತೆಯಲ್ಲೇ ಮಲಗಿ ವಾಹನ ಸವಾರರಿಗೆ ಪೀಕಲಾಟ ತಂದಿಟ್ಟ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರ ಸಮೀಪದ ಹಳಸೆ ಗ್ರಾಮದ ಬಳಿ ನಡೆದಿದೆ. ವಾಹನ ಸವಾರರು ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಕಂಡು ಅರೆಕ್ಷಣ ಗಾಬರಿಗೊಂಡಿದ್ದಾರೆ. ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ಆತ ಎದ್ದೇಳಲೇ ಇಲ್ಲ. ಕೆಲ ಹೊತ್ತಿನ ಬಳಿಕ ಎದ್ದು ಕುಳಿತು ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ಕುಡಿದ ಮತ್ತಿನಲ್ಲಿ ಈ ರೀತಿ ಗಡದ್ದಾಗಿ ನಿದ್ದೆ ಮಾಡಿದ್ದಾನೆ ಎಂದು ಸವಾರರು ಹೇಳಿದ್ದಾರೆ.

ದಾರಿ ಮಧ್ಯೆ ಈ ವ್ಯಕ್ತಿ ಮಲಗಿರುವುದನ್ನು ಕಂಡು ದಾರಿಹೋಕರು ಬೆಚ್ಚಿಬಿದ್ದಿದ್ದು, ಈ ವ್ಯಕ್ತಿ ಸಂಪೂರ್ಣ ಮದ್ಯಪಾನ ಮಾಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತಾ ಮುಂದೆ ಸಾಗಿದ್ದಾರೆ. ಒಟ್ಟಾರೆ ಎಣ್ಣೆ ಮತ್ತಿನಲ್ಲಿದ್ದ ವ್ಯಕ್ತಿಯ ಚೆಲ್ಲಾಟದಿಂದ ವಾಹನ ಸವಾರರು ಪರದಾಟ ಅನುಭವಿಸಿದರು. ಕುಡಿದ ನಶೆ ಇಳಿದ ನಂತರ ಆ ಜಾಗದಿಂದ ಆತ ಎದ್ದು ಹೋಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಗ್ರಾಪಂ ಕಚೇರಿಯೊಳಗೇ ತ್ಯಾಜ್ಯ ತಂದು ಸುರಿದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.