ETV Bharat / state

ವಿಷ ಕುಡಿಯುವುದಾಗಿ ಸಚಿವ ಸಿ. ಟಿ. ರವಿಗೆ ಬೆದರಿಕೆಯೊಡ್ಡಿದ ಮಹಿಳೆಯರು! - lady employee threatened c t ravi

ಸಚಿವ ಸಿ. ಟಿ. ರವಿ ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ಮಹಿಳೆವೋರ್ವಳು ಬೆದರಿಕೆ ಹಾಕಿದ್ದಾಳೆ. ಡಿ ದರ್ಜೆ ಗುತ್ತಿಗೆ ಮಹಿಳಾ ಸಿಬ್ಬಂದಿ, ವಿಷ ಕುಡಿಯುವುದಾಗಿ ಹೇಳಿದ್ದಾರೆ. ಆದ್ರೆ, ಈ ರೀತಿಯ ಬ್ಲ್ಯಾಕ್ ಮೇಲ್​ ನನ್ನ ಬಳಿ ನಡೆಯಲ್ಲ ಎಂದು ಸಚಿವ ರವಿ ಖಡಕ್ ಆಗಿ​ ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ
author img

By

Published : Sep 20, 2019, 4:06 PM IST

ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆ ವೀಕ್ಷಣೆಗೆ ಬಂದಿದ್ದ ಸಚಿವ ಸಿ. ಟಿ. ರವಿ ಮುಂದೆ ಆಸ್ಪತ್ರೆಯ ಡಿ ದರ್ಜೆ ಗುತ್ತಿಗೆ ನೌಕರರಾಗಿರುವ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 17 ಜನ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿದ ಹಿನ್ನೆಲೆ ಸಚಿವರಿಗೆ ಮನವಿ ನೀಡಲು ಬಂದಿದ್ದ ಮಹಿಳಾ ನೌಕರರು, ತಮಗೆ ನ್ಯಾಯ ಸಿಗದಿದ್ದರೆ ಸಾಯುವುದಾಗಿ ಬೆದರಿಕೆಯೊಡ್ಡಿದರು.

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಭೇಟಿ ಕೊಟ್ಟ ಸಚಿವ ಸಿ. ಟಿ. ರವಿ

ಈ ರೀತಿಯ ಬ್ಲ್ಯಾಕ್​ಮೇಲ್​ ನನ್ನ ಬಳಿ ನಡೆಯಲ್ಲ, ಇದನ್ನು ನನ್ನ ಬಳಿ ಇಟ್ಟುಕೊಳ್ಳಬೇಡಿ. ಹೇಳುವುದನ್ನು ಸರಿಯಾಗಿ ಹೇಳಿ, ಬ್ಲ್ಯಾಕ್​ಮೇಲ್​ ಒಳ್ಳೆಯದಲ್ಲ. ನಾನು ನಿಮ್ಮ ಗರಡಿಯಲ್ಲಿ ಬೆಳೆದು ಬಂದವನು ಎಂದು ಸಚಿವ ಸಿ. ಟಿ. ರವಿ ಖಡಕ್​ ಆಗಿ ಪ್ರತಿಕ್ರಿಯೆ ನೀಡಿದ್ರು. ಅಲ್ಲದೆ, ಈ ಕುರಿತು ಅಧಿಕಾರಿಗಳ ಜೊತೆ ಮಾತನಾಡುವುದಾಗಿಯೂ ತಿಳಿಸಿದ್ರು.

Intro:Kn_ckm_02_Black mail_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರು ನಗರದಲ್ಲಿರುವ ಜಿಲ್ಲಾಸ್ಪತ್ರೆ ವೀಕ್ಷಣೆ ಮಾಡಲು ಆಗಮಿಸಿದ ಸಚಿವ ಸಿ ಟಿ ರವಿ ಬಳಿ ಆಸ್ಪತ್ರೆ ಯಲ್ಲಿ ಕಾರ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದ ವಿಚಾರಕ್ಕೆ ಮಹಿಳೆ ಅಳಲು ಸಚಿವರ ಬಳಿ ತೋಡಿಕೊಂಡಿದ್ದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಬಳಿ ವಿಷ ಕುಡಿದು ಸಾಯುವುದಾಗಿ ಬೆದರಿಕೆ ಹಾಕಿದ್ದಾರೆ. ವಿಷ ಕುಡಿದು ಸಾಯುವುದಾಗಿ ಬೆದರಿಕೆ ಹಾಕಿದ ಮಹಿಳೆ ಹಾಕಿದ್ದು ಮನವಿ ಪತ್ರ ನೀಡುವ ವೇಳೆಯಲ್ಲಿ ಸಚಿವ ಸಿ ಟಿ ರವಿ ಕಾಲಿಗೆ ಮಹಿಳೆಯರು ಬಿದಿದ್ದಾರೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 17 ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು ಮಹಿಳೆಯ ಬೆದರಿಕೆಗೆ ಸ್ಥಳದಲ್ಲಿಯೇ ಸಚಿವ ಸಿಟಿ ರವಿ ಖಡಕ್ ಉತ್ತರ ನೀಡಿದ್ದಾರೆ. ಈ ರೀತಿಯ ಬ್ಲಾಕ್ಮೈಲ್ ನನ್ನ ಬಳಿ ನಡೆಯಲ್ಲ, ಬ್ಲಾಕ್ಮೈಲ್ ಮಾಡುವುದನ್ನು ನನ್ನ ಬಳಿ ಇಟ್ಟುಕೊಳ್ಳಬೇಡಿ. ಹೇಳುವುದನ್ನು ಸರಿಯಾಗಿ ಹೇಳಿ ಬ್ಲಾಕ್ಮೈಲ್ ಒಳ್ಳೆಯದಲ್ಲ.ನಾನು ನಿಮ್ಮ ಗರಡಿಯಲ್ಲಿ ಬೆಳೆದು ಬಂದವನು ಎಂದೂ ಸಮಸ್ಯೆ ಹೇಳಿಕೊಂಡು ಬಂದ ಡಿ ಗ್ರೂಪ್ ನೌಕರರಿಗೆ ಸಿಟಿ ರವಿ ಜಿಲ್ಲಾಸ್ಪತ್ರೆಯಲ್ಲಿ ಖಡಕ್ ಉತ್ತರ ನೀಡಿದ್ದಾರೆ....

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.