ಚಿಕ್ಕಮಗಳೂರು : ಕಾರಿನಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದ ಆರೋಪಿಯೋರ್ವನನ್ನು ಬಜಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
![A accused arrested for stealing cattle in car](https://etvbharatimages.akamaized.net/etvbharat/prod-images/kn-ckm-05-arrest-av-7202347_27102020144417_2710f_1603790057_127.jpg)
ಜಿಲ್ಲೆಯ ಶೃಂಗೇರಿ ನಗರದ ಶ್ರೀ ಮಾತಾ ಪೆಟ್ರೋಲ್ ಬಂಕ್ ಬಳಿ ನಾಲ್ಕು ಜನ ಆರೋಪಿಗಳು ಇತ್ತೀಚೆಗೆ ಕಾರಿನಲ್ಲಿ ಬಂದು ಜಾನುವಾರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಖದೀಮರ ದೃಶ್ಯ ಪೆಟ್ರೋಲ್ ಬಂಕ್ನ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಖಚಿತ ಮಾಹಿತಿ ಹಿನ್ನೆಲೆ ಸಫ್ವಾನ್ ಮಹಮ್ಮದ್ ಎಂಬ ಆರೋಪಿಯನ್ನು ಇದೀಗ ಬಂಧಿಸಿದ್ದಾರೆ.
![A accused arrested for stealing cattle in car](https://etvbharatimages.akamaized.net/etvbharat/prod-images/kn-ckm-05-arrest-av-7202347_27102020144417_2710f_1603790057_59.jpg)
ನ್ಯಾಯಲಯದಿಂದ ಆತನ ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯು ಇತರೆ ಆರೋಪಿಗಳೊಂದಿಗೆ ಸೇರಿ ಜಾನುವಾರು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಕಾರು ಹಾಗೂ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಮೂರು ಜನ ಆರೋಪಿಗಳು ತಲೆಮರಿಸಿಕೊಂಡಿದ್ದು ಅವರ ಶೋಧ ಕಾರ್ಯ ಮುಂದುವರೆದಿದೆ.