ಚಿಕ್ಕಮಗಳೂರು : ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದೆ. ಮತ್ತೆ 38 ಕೊರೊನಾ ಪ್ರಕರಣ ವರದಿಯಾಗಿವೆ. ಈ ಮೂಲಕ ನಾಲ್ಕು ದಿನದಲ್ಲಿ ಒಂದೇ ವಸತಿ ಶಾಲೆಯಲ್ಲಿ 107 ಕೇಸ್ ಪತ್ತೆಯಾಗಿವೆ.
ಇಂದು 30 ವಿದ್ಯಾರ್ಥಿಗಳು, ಮೂವರು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ನಿನ್ನೆ 70 ಕೇಸ್ ಪತ್ತೆಯಾಗಿತ್ತು. ಇವತ್ತು ಮತ್ತೆ 38 ಕೇಸ್ ಪತ್ತೆಯಾಗಿವೆ. 94 ವಿದ್ಯಾರ್ಥಿಗಳು, 13 ಶಿಕ್ಷಕರರು ಸೇರಿದಂತೆ 107 ಮಂದಿಯಲ್ಲಿ ಕೊರೊನಾ ದೃಢವಾಗಿದೆ.
ನಾಲ್ಕೇ ದಿನದಲ್ಲಿ 107 ಕೇಸ್ ಪತ್ತೆಯಾಗಿವೆ. ಬಾಳೆಹೊನ್ನೂರು ಸಮೀಪದ ಸಿಗೋಡುನಲ್ಲಿರೋ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಹೆಚ್ಚಿನ ಓದಿಗೆ:ಚಿಕ್ಕಮಗಳೂರು: ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 40 ಮಂದಿಗೆ ಕೋವಿಡ್
ಮೊದಲು ಶಿಕ್ಷಕರಿಗೊಬ್ಬರಿಗೆ ಕೊರೊನಾ ಕಾಣಿಸಿತ್ತು. ನಂತರ 418 ವಿದ್ಯಾರ್ಥಿಗಳು, ಸಿಬ್ಬಂದಿ ಸ್ವ್ಯಾಬ್ ಅನ್ನು ಆರೋಗ್ಯ ಇಲಾಖೆ ಪಡೆದಿತ್ತು. 418ರಲ್ಲಿ 107 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈಗಾಗಲೇ ಜಿಲ್ಲಾಡಳಿತ ಜವಾಹರ್ ನವೋದಯ ವಿದ್ಯಾಲಯವನ್ನ ಸೀಲ್‌ಡೌನ್ ಮಾಡಿದೆ.
ಕೊರೊನಾ ಪತ್ತೆಯಾದವರಲ್ಲಿ ಯಾವುದೇ ಲಕ್ಷಣಗಳಿಲ್ಲ. ವಸತಿ ಶಾಲೆಯಲ್ಲಿಯೇ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದೆ. ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಚಿಕ್ಕಮಗಳೂರು ಜನರಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ.