ETV Bharat / state

196 ಜನರಿಗೆ ಹೋಂ ಕ್ವಾರಂಟೈನ್​ನಿಂದ ಮುಕ್ತಿ: ಜಿಲ್ಲಾ ಸರ್ವೇಕ್ಷಣಾಧಿಕಾರಿ

ಚಿಕ್ಕಮಗಳೂರಿನಲ್ಲಿ ಈಗಾಗಲೇ 196 ಜನರು 14 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ ಹಿನ್ನೆಲೆ ಅವರಿಗೆಲ್ಲಾ ಇದರಿಂದ ಮುಕ್ತಿ ದೊರೆಯಲಿದ್ದು, ಜಿಲ್ಲೆಗೆ ವಿದೇಶದಿಂದ ಮರಳಿದ ಬಹುತೇಕರು ಸೇಫ್ ಆಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್ ಹೇಳಿದರು.

chikkamagalore
ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್
author img

By

Published : Apr 1, 2020, 4:31 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈವರೆಗೂ 273 ಜನರು ಹೋಂ ಕ್ವಾರೈಂಟೈನ್​ನಲ್ಲಿದ್ದು, ಇನ್ನೂ ಎರಡು ದಿನಗಳಲ್ಲಿ 196 ಜನರಿಗೆ ಹೋಂ ಕ್ವಾರಂಟೈನ್​ನಿಂದ ಮುಕ್ತಿ ದೊರೆಯಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್ ಹೇಳಿದ್ದಾರೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್

ಈಗಾಗಲೇ 196 ಜನರು 14 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ ಹಿನ್ನೆಲೆ ಅವರಿಗೆಲ್ಲಾ ಇದರಿಂದ ಮುಕ್ತಿ ದೊರೆಯಲಿದ್ದು, ಜಿಲ್ಲೆಗೆ ವಿದೇಶದಿಂದ ಮರಳಿದ ಬಹುತೇಕರು ಸೇಫ್ ಆಗಿದ್ದಾರೆ ಎಂದರು. 273 ಜನರು ವಿದೇಶದಿಂದ ಚಿಕ್ಕಮಗಳೂರು ಜಿಲ್ಲೆಗೆ ಬಂದವರಾಗಿದ್ದು, ಅವರ ಕುಟುಂಬದ ಸದಸ್ಯರಿಗೂ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಅವರ ಮನೆಯ ಮುಂದೆ ಆರೋಗ್ಯ ಇಲಾಖೆ ವತಿಯಿಂದ ಒಂದು ಪತ್ರವನ್ನು ಸಹ ಅಂಟಿಸಲಾಗಿದ್ದು, ಈಗಾಗಲೇ 9 ಮಂದಿ ಶಂಕಿತರ ವರದಿ ನೆಗೆಟಿವ್ ಬಂದಿದೆ.

ಇದುವರೆಗೂ ಜಿಲ್ಲಾದ್ಯಂತ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಇಂದು ಜಿಲ್ಲೆಯಲ್ಲಿ ಯಾರಿಗೂ ಕೊರೊನಾ ವೈರಸ್ ತಪಾಸಣೆ ನಡೆಸಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.