ETV Bharat / state

ಚಿಕ್ಕಮಗಳೂರು : ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಅಧಿಕಾರಿಗಳಿಗೆ 13 ದಿನ ನ್ಯಾಯಾಂಗ ಬಂಧನ - ಲಂಚ ಪಡೆದು ಸಿಕ್ಕಿಬಿದ್ದಿದ್ದ ಅಧಿಕಾರಿಗಳಿಗೆ ಜೈಲು ಗತಿ

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅಂಬುಜಾ ಹಾಗೂ ನೆಮ್ಮಾರು ಪಂಚಾಯತ್‌ನ ಗ್ರಾಮ ಲೆಕ್ಕಿಗ ಸಿದ್ದಪ್ಪರನ್ನು 13 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ..

chikkamagaluru
ಲಂಚ
author img

By

Published : Jan 7, 2022, 4:17 PM IST

ಚಿಕ್ಕಮಗಳೂರು : ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅಂಬುಜಾ ಹಾಗೂ ನೆಮ್ಮಾರು ಪಂಚಾಯತ್‌ನ ಗ್ರಾಮ ಲೆಕ್ಕಿಗ ಸಿದ್ದಪ್ಪರನ್ನು 13 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶೃಂಗೇರಿಯ ಕಾವಡಿ ವಾಸಿ ಸಂಜಯ್​ಕುಮಾರ್ ಎಂಬುವರಿಗೆ ಮನೆಯ ಹಕ್ಕುಪತ್ರ ನೀಡಲು 60 ಸಾವಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಹಶೀಲ್ದಾರ್​ ಅಂಬುಜಾ ಮತ್ತು ಗ್ರಾಮ ಲೆಕ್ಕಿಗ ಸಿದ್ದಪ್ಪ ನಿನ್ನೆ ಸಂಜಯಕುಮಾರ್​ರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು.

ಬಳಿಕ ಶೃಂಗೇರಿ ನಿರೀಕ್ಷಣಾ ಮಂದರಿದಲ್ಲಿ ನಡೆದ ಅಧಿಕಾರಿಗಳನ್ನು ಬಂಧಿಸಿದಂತೆ ಅವರ ಕಡೆಯವರು ಹೈಡ್ರಾಮಾ ನಡೆಸಿದ್ದರು. ಬಳಿಕ ಸುದೀರ್ಘ ಕಿತ್ತಾಟದ ಬಳಿಕ ಇಬ್ಬರು ತಪ್ಪಿತಸ್ಥ ಅಧಿಕಾರಿಗಳನ್ನು ಎಸಿಬಿ ಪೊಲೀಸರು ವಿಚಾರಣೆ ನಡೆಸಿ ತಹಶೀಲ್ದಾರ್ ಅಂಬುಜಾರನ್ನು ಪ್ರಮುಖ ಆರೋಪಿಯಾಗಿ (ಎ1), ಸಿದ್ದೇಶ್ ಎ2 ಎಂದು ಪರಿಗಣಿಸಿ ಕೇಸ್ ದಾಖಲಿಸಿದ್ದರು.

ವಿಚಾರಣೆ ಬಳಿಕ ಅಧಿಕಾರಿಗಳು ರಾತ್ರಿಯೇ ಆರೋಪಿಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಕೋರ್ಟ್​ ವಿಚಾರಣೆ ಬಳಿಕ ಇಬ್ಬರನ್ನೂ ಜನವರಿ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ರಾತ್ರಿಪೂರ್ತಿ ನಡೆದ ಹೈಡ್ರಾಮಾ : ನಿನ್ನೆ ರಾತ್ರಿ ಶೃಂಗೇರಿ ನಿರೀಕ್ಷಣಾ ಮಂದಿರದಲ್ಲಿ ತನಿಖೆ ನಡೆಸುತ್ತಿದ್ದ ವೇಳೆ ರಾಜಕೀಯ ಪಕ್ಷಗಳ ಕೆಲ ಮುಖಂಡರು ಅಂಬುಜಾ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು. ಅವರು ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರನ್ನು ಬಂಧಿಸಬಾರದು ಎಂದು ಪಟ್ಟು ಹಿಡಿದಿದ್ದರು. ಆದರೆ, ಕಾನೂನಿನ ಪ್ರಕಾರ ಕ್ರಮಕೈಗೊಳ್ಳುವುದಾಗಿ ಎಸಿಬಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಇದನ್ನೂ ಓದಿ: ಕಂದಾಯ ಸಚಿವ ಆರ್.ಅಶೋಕ್‌ಗೆ ಕೋವಿಡ್ ಪಾಸಿಟಿವ್‌, ಆಸ್ಪತ್ರೆಗೆ ದಾಖಲು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.