ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಬರೋಬ್ಬರಿ 10 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಈ ದಿನ ಒಬ್ಬರು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ 36 ಜನ ಸೋಂಕಿತರು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ತರೀಕೆರೆ ತಾಲೂಕಿನ ಅಜ್ಜಂಪುರ ಮೂಲದ, ಓರ್ವ ವಯೋ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಇಂದು ಮತ್ತೆ 10 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 31 ವರ್ಷದ ಪುರುಷ, 50 ವರ್ಷದ ಮಹಿಳೆ, 76 ವರ್ಷದ ಪುರುಷ, 60 ವರ್ಷದ ಪುರುಷ, 6 ವರ್ಷದ ಹೆಣ್ಣು ಮಗು, 26 ವರ್ಷದ ಮಹಿಳೆ, 37 ವರ್ಷದ ಪುರುಷ, 39 ವರ್ಷದ ಪುರುಷ, 55 ವರ್ಷದ ಮಹಿಳೆ, 2 ವರ್ಷದ ಹೆಣ್ಣು ಮಗು ಇವರಲ್ಲಿ ಈ ಕೊರೊನಾ ಸೋಂಕು ಪತ್ತೆಯಾಗಿದೆ.
ಈ 10 ಜನರಲ್ಲಿ ಚಿಕ್ಕಮಗಳೂರು ತಾಲೂಕಿನ ಮೂವರಿದ್ದು, ತರೀಕೆರೆ ತಾಲೂಕಿನಲ್ಲಿ ಒಟ್ಟು 06 ಜನರಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಮೂಡಿಗೆರೆ ತಾಲೂಕಿನಲ್ಲಿ ಒಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. ಇದರಲ್ಲಿ 3 ಜನರು ತಮಿಳುನಾಡು ಮೂಲದಿಂದ ಬಂದವರಾಗಿದ್ದು, ಓರ್ವರು ಅಂತರಾಷ್ಟ್ರೀಯ ಪ್ರವಾಸ ಮಾಡಿದವರಾಗಿದ್ದಾರೆ. ಐದು ಜನರಿಗೆ ಪ್ರಾರ್ಥಮಿಕ ಸಂಪರ್ಕದಿಂದ ಈ ಸೋಂಕು ತಗುಲಿದರೇ, ಇನ್ನು ಓರ್ವ ವ್ಯಕ್ತಿಗೆ ಪರೀಕ್ಷೆ ವೇಳೆ ಈ ಸೋಂಕು ಪತ್ತೆಯಾಗಿದೆ.
ಈ ಸೋಂಕಿತರು ವಾಸ ಮಾಡುತ್ತಿದ್ದ ಏರಿಯಾವನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸೀಲ್ಡೌನ್ ಮಾಡಿ, ಕಟ್ಟೆಚ್ಚರ ವಹಿಸಿದೆ. ಜಿಲ್ಲಾ ಆರೋಗ್ಯ ಇಲಾಖೆ ಈ 10 ಜನ ಸೋಂಕಿತರ ಜೊತೆ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಜನರ ಶೋಧ ಕಾರ್ಯ ಪ್ರಾರಂಭ ಮಾಡಿದ್ದು, ಈ 10 ಕೊರೊನಾ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.