ETV Bharat / state

ಗಾಂಧೀಜಿಯ ಹೋರಾಟದ ಸ್ವರೂಪ ಬದಲಿಸಿತು ಕರುನಾಡ ಈ ಹತ್ಯಾಕಾಂಡ.. ವಿದುರಾಶ್ವತ್ಥ-ಜಲಿಯನ್ ವಾಲಾಬಾಗ್‌ ಸಾಮ್ಯತೆ..

ಕಾಂಗ್ರೆಸ್‌ ಹೋರಾಟ ಬರೀ ಬ್ರಿಟಿಷರ ವಿರುದ್ಧವಷ್ಟೇ ಅಲ್ಲ, ಬ್ರಿಟಿಷರ ಅಧೀನಕ್ಕೊಳಪಟ್ಟ ಸಂಸ್ಥಾನಗಳ ವಿರುದ್ಧವೂ ಬಲವಾದ ಹೋರಾಟಕ್ಕೆ ಗಾಂಧೀಜಿ ಕರೆ ನೀಡಿದರು. ಇದು ಬಹಳ ಮುಖ್ಯ ಹಂತ. ಇಡೀ ಭಾರತಕ್ಕೆ ಕಾಂಗ್ರೆಸ್‌ ಚಳವಳಿ ನಡೆಸಲು ಗಾಂಧಿ ನಿರ್ಣಯಿಸಿಬಿಟ್ಟರು. ಅದಕ್ಕೆ ಕಾರಣವೇ ವಿದುರಾಶ್ವತ್ಥ..

viduraswatha-is-the-jaliyanvalabhaga-of-karnataka
ವಿದುರಾಶ್ವತ್ಥ ಕರ್ನಾಟಕದ ಜಲಿಯನ್ ವಾಲಾಬಾಗ್
author img

By

Published : Aug 15, 2021, 6:16 AM IST

Updated : Aug 15, 2021, 6:06 PM IST

ವಿದುರಾಶ್ವತ್ಥ : ಕಾಂಗ್ರೆಸ್‌ ಎಲ್ಲೇ ಚಳವಳಿ ನಡೆಸಿದ್ರೂ ಸ್ವಾತಂತ್ರ್ಯ ಸಂಕೇತವಾಗಿ ತ್ರಿವರ್ಣ ಧ್ವಜ ಹಾರಿಸಲೆತ್ನಿಸುತ್ತಿತ್ತು. ಬ್ರಿಟಿಷರು ಇದನ್ನ ನಿಷೇಧಿಸಿದ್ದರೂ ಮಂಡ್ಯದ ಶಿವಪುರದ ತ್ರಿವರ್ಣ ಧ್ವಜ ಸತ್ಯಾಗ್ರಹ ಯಶಸ್ವಿಯಾಗಿತ್ತು.

ವಿದುರಾಶ್ವತ್ಥದಲ್ಲೂ ಧ್ವಜ ಸತ್ಯಾಗ್ರಹವಾದ್ರೇ ಹೆಚ್ಚು ಜನರನ್ನ ಕಾಂಗ್ರೆಸ್‌ನತ್ತ ಆಕರ್ಷಿಸಬಹುದು ಅನ್ನೋ ಆಲೋಚನೆ. ಆದರೆ, ಸತ್ಯಾಗ್ರಹ ಮಣಿಸಲು ಸಶಸ್ತ್ರ ಪೊಲೀಸರು ಒಂದು ತಿಂಗಳಿಂದ ಷಡ್ಯಂತ್ರ ಹೆಣೆದಿದ್ದರು. 1938ರ ಆ ದಿನ ಹೋರಾಟಗಾರರು ಧ್ವಜ ಹಾರಿಸಲು ಮುಂದಾಗ್ತಾರೆ. ಆಗ ಲಾಠಿಚಾರ್ಜ್ ಆಗುತ್ತೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು,ಇಟ್ಟಿಗೆ ತೂರುತ್ತಾರೆ. ಆಗ ಪೊಲೀಸರು ನಡೆಸಿದ ಗೋಲಿಬಾರ್‌ಗೆ 32ಕ್ಕೂ ಹೆಚ್ಚು ಜನ ಹುತಾತ್ಮರಾಗ್ತಾರೆ.

ವಿದುರಾಶ್ವತ್ಥ ಕರ್ನಾಟಕದ ಜಲಿಯನ್ ವಾಲಾಬಾಗ್

ವಿದುರಾಶ್ವತ್ಥ ಕರ್ನಾಟಕದ ಜಲಿಯನ್ ವಾಲಾಬಾಗ್ ಯಾಕೆ? : ಪಂಜಾಬ್‌ನ ಜಲಿಯನ್ ವಾಲಾಬಾಗ್‌ ದಂಗೆಯಾದ ಭರ್ತಿ 19 ವರ್ಷದ ಬಳಿಕ, ಈಗಿನ ಚಿಕ್ಕಬಳ್ಳಾಪುರದ ಗೌರಿಬಿದನೂರು ಬಳಿಯ ವಿದುರಾಶ್ವತ್ಥದ ಗೋಲಿಬಾರ್‌ ನಡೀತು. ಅಲ್ಲಿದ್ದಂತೆಯೇ ವಿದುರಾಶ್ವತ್ಥದಲ್ಲೂ ಅತ್ಯಂತ ಕಿರಿದಾದ ದಾರಿ ಇತ್ತು.

ಆ ದಾರಿ ತಡೆದ್ರೆ ಒಳಗಿನವರು ಹೊರ ಬರಲಾಗ್ತಿರಲಿಲ್ಲ. ಸುತ್ತಲೂ ಕಾಡು. ಮಂಟಪದಲ್ಲಿದ್ದ ಕಿಟಕಿಗಳ ಮೂಲಕ ಪೊಲೀಸರು ಗುಂಡು ಹಾರಿಸ್ತಾರೆ. ಹಾಗಾಗಿ, ಜಲಿಯನ್ ವಾಲಾಬಾಗ್‌ ಮತ್ತು ವಿದುರಾಶ್ವತ್ಥಕ್ಕೂ ಸಾಮ್ಯತೆ. ಆಮೇಲೆ ಕರ್ನಾಟಕದ ಜಲಿಯನ್ ವಾಲಾಬಾಗ್ ಅಂತಾ ಇದಕ್ಕೆ ಹೆಸರು ಬಂತು.

ಸರ್ದಾರ್ ಪಟೇಲ್-ಮಿರ್ಜಾ ಇಸ್ಮಾಯಿಲ್‌ ಒಪ್ಪಂದ ಹೇಳೋದೇನು? : ವಿದುರಾಶ್ವತ್ಥದ ಗೋಲಿಬಾರ್‌ ಬಿಬಿಸಿಯಲ್ಲೂ ಪ್ರಸಾರವಾಯ್ತು. ಗಾಂಧೀಜಿ ಆಗ ಮುಂಬೈನಲ್ಲಿದ್ದರು. ಸರ್ದಾರ್ ಪಟೇಲ್ ಮತ್ತು ಆಚಾರ್ ಕೃಪಲಾನಿ ಇವರಿಬ್ಬರನ್ನೂ ಇದೇ ಸ್ಥಳಕ್ಕೆ ಕಳುಹಿಸಿದ್ದರು. ಆಗಲೇ, ಬ್ರಿಟಿಷರ ಧ್ವಜದ ಜತೆಗೇ ಕಾಂಗ್ರೆಸ್‌ ಝೆಂಡಾ ಹಾರಿಸಲು ಮಿರ್ಜಾ-ಪಟೇಲ್ ಒಪ್ಪಂದವಾಗುತ್ತೆ. ಆಗ ಧ್ವಜ ಅಂದ್ರೇ ಸ್ವಾತಂತ್ರ್ಯ ಹೋರಾಟದ ಸಂಕೇತ. ಆ ಸಂಕೇತ ಮುಂದಿಟ್ಟೇ ಚಳವಳಿ ಮಾಡುವುದು ಕಾಂಗ್ರೆಸ್‌ ಆಕಾಂಕ್ಷೆಯಾಗಿತ್ತು.

ಈ ಗೋಲಿಬಾರ್‌ನಿಂದ ಗಾಂಧೀಜಿಯ ಹೋರಾಟದ ಸ್ವರೂಪ ಬದಲಾಯ್ತು : ಈ ಗೋಲಿಬಾರ್‌ಗೂ ಮೊದಲು ನೇರ ಬ್ರಿಟಿಷ್ ಆಡಳಿತವಿರುವ ಕಡೆ ಪ್ರಬಲವಾಗಿ ಕಾಂಗ್ರೆಸ್ ಹೋರಾಡುತ್ತಿತ್ತು. ಆದರೆ, ಸಂಸ್ಥಾನಗಳ ವಿರುದ್ಧ ಪ್ರಬಲ ಹೋರಾಟ ಮಾಡದಂತೆ ಗಾಂಧೀಜಿ ಕಾಂಗ್ರೆಸ್‌ಗೆ ಕರೆಕೊಟ್ಟಿದ್ದರು. ಜತೆಗೆ ಮೈಸೂರಿನ ಮಹಾರಾಜರು ಮತ್ತು ಮಿರ್ಜಾ ಇಸ್ಮಾಯಿಲ್‌ರ ಆಡಳಿತದ ಬಗ್ಗೆ ಗಾಂಧೀಜಿಗೆ ತುಂಬ ಅಭಿಮಾನವಿತ್ತು. ಆದರೆ, ವಿದುರಾಶ್ವತ್ಥ ದಂಗೆ ಬಳಿಕ ಗಾಂಧಿ ಅಭಿಪ್ರಾಯ ಬದಲಾಯ್ತು.

ಕಾಂಗ್ರೆಸ್‌ ಹೋರಾಟ ಬರೀ ಬ್ರಿಟಿಷರ ವಿರುದ್ಧವಷ್ಟೇ ಅಲ್ಲ, ಬ್ರಿಟಿಷರ ಅಧೀನಕ್ಕೊಳಪಟ್ಟ ಸಂಸ್ಥಾನಗಳ ವಿರುದ್ಧವೂ ಬಲವಾದ ಹೋರಾಟಕ್ಕೆ ಗಾಂಧೀಜಿ ಕರೆ ನೀಡಿದರು. ಇದು ಬಹಳ ಮುಖ್ಯ ಹಂತ. ಇಡೀ ಭಾರತಕ್ಕೆ ಕಾಂಗ್ರೆಸ್‌ ಚಳವಳಿ ನಡೆಸಲು ಗಾಂಧಿ ನಿರ್ಣಯಿಸಿಬಿಟ್ಟರು. ಅದಕ್ಕೆ ಕಾರಣವೇ ವಿದುರಾಶ್ವತ್ಥ.

ಓದಿ: ಕ್ವಿಟ್ ಇಂಡಿಯಾ ಚಳುವಳಿಗೆ 79ನೇ ವರ್ಷ: ವಿಡಿಯೋ ನೋಡಿ ಘಟನೆಯನ್ನೊಮ್ಮೆ ಸ್ಮರಿಸಿ

Last Updated : Aug 15, 2021, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.