ETV Bharat / state

ವಾಲ್ಮೀಕಿ ಸಮಾಜಕ್ಕೆ 7.5ಮೀಸಲಾತಿ.. ಶಾಸಕ ಸುಬ್ಬಾರೆಡ್ಡಿ ಆಗ್ರಹ

ಜನಸಂಖ್ಯೆಗೆ ಅನುಗುಣವಾಗಿ ವಾಲ್ಮೀಕಿ ಜನಾಂಗಕ್ಕೆ ಈಗಿರುವ ಮೀಸಲಾತಿ ಬದಲು ಶೇ.7.5ರಷ್ಟು ಮೀಸಲಾತಿ ನೀಡುವಂತೆ ವಿಧಾನಸಭೆಯಲ್ಲಿ ಒತ್ತಡ ಹೇರುತ್ತೇನೆ ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತಿಳಿಸಿದರು.

valmiki-community-demand-for-reservation
author img

By

Published : Oct 21, 2019, 11:47 PM IST

ಗುಡಿಬಂಡೆ: ಜನಸಂಖ್ಯೆಗೆ ಅನುಗುಣವಾಗಿ ವಾಲ್ಮೀಕಿ ಜನಾಂಗಕ್ಕೆ ಈಗಿರುವ ಮೀಸಲಾತಿ ಬದಲು ಶೇ.7.5ರಷ್ಟು ಮೀಸಲಾತಿ ನೀಡುವಂತೆ ವಿಧಾನಸಭೆಯಲ್ಲಿ ಒತ್ತಡ ಹೇರುತ್ತೇನೆ ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತಿಳಿಸಿದರು.

ನಗರದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಲ್ಮೀಕಿ ಜನಾಂಗಕ್ಕೆ ಇಂದು ಕೇವಲ ಶೇ.3.5ರಷ್ಟು ಮೀಸಲಾತಿ ಇದೆ. ಇದರಿಂದ ವಾಲ್ಮೀಕಿ ಜನಾಂಗಕ್ಕೆ ತುಂಬಾ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಈ ಬಗ್ಗೆ ಸರ್ಕಾರವೂ ಗಮನ ಹರಿಸಬೇಕು ಎಂದರು.

ಶಾಸಕ ಎಸ್ ಎನ್ ಸುಬ್ಬಾರೆಡ್ಡಿ..

ರಾಮಾಯಣ ಮಹಾಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ಅವರ ಜೀವನದಲ್ಲಾದ ಮಹತ್ತರ ತಿರುವುಗಳನ್ನು ನಾವೆಲ್ಲರೂ ಅರಿತು ನಮ್ಮ ಬದುಕಿನಲ್ಲೂ ವಿಶೇಷ ಸಾಧನೆ ಮಾಡಬೇಕು. ಹೀಗೆ ಸಮಾಜ ಸುಧಾರಣೆಗಾಗಿ ಮಹನೀಯರು ತಮ್ಮ ಜೀವನವನ್ನೇ ತ್ಯಾಗಮಾಡಿದ್ದಾರೆ. ಅಂತಹ ಮಹನೀಯರ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದರು.

Intro:ವಾಲ್ಮೀಕಿ ಜನಾಂಗಕ್ಕೆ 7.5 ಮೀಸಲಾತಿ ನೀಡಲು ಒತ್ತಡ ಹೇರುವೆ: ಸುಬ್ಬಾರೆಡ್ಡಿBody:ಬೈಟ್ : ಎಸ್. ಎನ್. ಸುಬ್ಬಾರೆಡ್ಡಿ ಬಾಗೇಪಲ್ಲಿ ಶಾಸಕ Conclusion:ವಾಲ್ಮೀಕಿ ಜನಾಂಗಕ್ಕೆ 7.5 ಮೀಸಲಾತಿ ನೀಡಲು ಒತ್ತಡ ಹೇರುವೆ: ಸುಬ್ಬಾರೆಡ್ಡಿ
ಮಹನೀಯರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು

ಗುಡಿಬಂಡೆ: ಜನಸಂಖ್ಯೆಗೆ ಅನುಗುಣವಾಗಿ ವಾಲ್ಮೀಕಿ ಜನಾಂಗಕ್ಕೆ ಈಗಿರುವ ಮೀಸಲಾತಿ ಬದಲು ಶೇ.7.5 ರಷ್ಟು ಮೀಸಲಾತಿ ನೀಡುವಂತೆ ವಿಧಾನಸಭೆಯಲ್ಲಿ ಒತ್ತಡ ಹೇರುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

         ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ವಾಲ್ಮೀಕಿ ಸಂಘ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ವಾಲ್ಮೀಕಿ ಜನಾಂಗವು ಇಂದು ಕೇವಲ 3.5ರಷ್ಟು ಮೀಸಲಾತಿಯನ್ನು ಪಡೆಯುತ್ತಿದೆ. ಇದರಿಂದ ವಾಲ್ಮೀಕಿ ಜನಾಂಗಕ್ಕೆ ಅನ್ಯಾಯವಾಗುತ್ತಿದ್ದು,

ಮುಂದಿನ ಅಧಿವೇಶನದಲ್ಲಿ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ 7.5 ರಷ್ಟು ಹೆಚ್ಚಳ ಮಾಡುವಂತೆ ತಾವು ತಮ್ಮ ಶಾಸಕರು ಒತ್ತಡ ಹೇರುತ್ತೇವೆ. ರಾಮಾಯಣದ ಮೂಲಕ ಆದರ್ಶ ಬದುಕಿಗೆ ದಾರಿ ಮಾಡಿಕೊಟ್ಟ ವಾಲ್ಮೀಕಿ ಮಹರ್ಷಿ ರಾಮನ ಆದರ್ಶಗಳನ್ನು ತಿಳಿಯಪಡಿಸುವ ಮೂಲಕ ಸಮಾಜದಲ್ಲಿ ಸಮನ್ವಯತೆ ಸಾರಿದ್ದಾರೆ.

ಇಡೀ ಜಗತ್ತೇ ಮೆಚ್ಚುವಂತಹ ರಾಮಾಯಣವನ್ನು ರಚಿಸುವ ಮೂಲಕ ನಿತ್ಯ ನೂತನ ವ್ಯವಸ್ಥೆಯನ್ನು ಹುಟ್ಟುಹಾಕಿದವರು, ಅವರು ಜನಾಂಗದ ಸ್ವತ್ತಲ್ಲ ನಾಡಿನ ಸ್ವತ್ತು, ಮನುಷ್ಯ ಉತ್ತಮ ಸಂಸ್ಕಾರ ಮತ್ತು ಜಾಣತನದ ಬಗ್ಗೆ ತೋರಿಸಿಕೊಟ್ಟಿದ್ದಾರೆ.

ಅವರು ಹಾಕಿಕೊಟ್ಟಂತಹ ಮಾರ್ಗದರ್ಶನದಲ್ಲಿ ನಾವೆಲ್ಲರೂ ಬಾಳಬೇಕು. ರಾಮಾಯಣ ಮಹಾಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ಅವರ ಜೀವನದಲ್ಲಿ ಆದ ಮಹತ್ತರ ತಿರುವುಗಳನ್ನು ನಾವೆಲ್ಲರೂ ಅರಿತು ನಮ್ಮ ಬದುಕಿನಲ್ಲೂ ವಿಶೇಷ ಸಾಧನೆ ಮಾಡಬೇಕು. ಹೀಗೆ ಸಮಾಜ ಸುಧಾರಣೆಗೆ ಅನೇಕ ಮಹನೀಯರು ತಮ್ಮ ಜೀವನವನ್ನೇ ತ್ಯಾಗಮಾಡಿದ್ದಾರೆ.

ಅಂತಹ ಮಹನೀಯರ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದರು.
         
ETV Bharat Logo

Copyright © 2024 Ushodaya Enterprises Pvt. Ltd., All Rights Reserved.