ETV Bharat / state

Watch video: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಂದೆ - ಮಗನನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ - ಕುಶಾವತಿ ನದಿ

ಸಂಬಂಧಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಂದೆ-ಮಗ ಆಯತಪ್ಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಕುಶಾವತಿ ನದಿಗೆ (Kushavati River) ಬಿದ್ದಿದ್ದು, ಇಬ್ಬರನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಲಾಗಿದೆ.

ಕುಶಾವತಿ ನದಿ
kushavati river
author img

By

Published : Nov 22, 2021, 11:02 AM IST

ಚಿಕ್ಕಬಳ್ಳಾಪುರ: ಕುಶಾವತಿ ನದಿಯಲ್ಲಿ (Kushavati River) ದ್ವಿಚಕ್ರ ವಾಹನ ಸಮೇತ ಕೊಚ್ಚಿ ಹೋಗುತ್ತಿದ್ದ ತಂದೆ - ಮಗನನ್ನು ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೊಸವುಡ್ಯ ಗ್ರಾಮದ ಬಳಿ ನಡೆದಿದೆ.

ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ವ್ಯಕ್ತಿ, ತನ್ನ ಮಗನ ಜೊತೆ ಚೇಳೂರು ಸಮೀಪದ ಚಾಕವೇಲು ಗ್ರಾಮದಲ್ಲಿ ನಡೆಯುತ್ತಿದ್ದ ಸಂಬಂಧಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಆದರೆ, ಭಾರಿ ಪ್ರಮಾಣದಲ್ಲಿ ಮಳೆಯಾದ ಕಾರಣ ಕುಶಾವತಿ ನದಿ ಅಪಾಯಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಆಯತಪ್ಪಿ ತಂದೆ-ಮಗ ನದಿ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಕುಶಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ತಂದೆ-ಮಗನ ರಕ್ಷಣೆ

ದ್ವಿಚಕ್ರ ವಾಹನ ಸಮೇತ ಇಬ್ಬರು ನೀರಿನಲ್ಲಿ ಬಿದ್ದಿದ್ದನ್ನು ಕಂಡ ಸುತ್ತಮುತ್ತಲಿನ ಜಮೀನುಗಳಿದ್ದ ಜನರು ಕೂಗಿ ಕೊಂಡಿದ್ದಾರೆ. ಅಲ್ಲಿಯೇ ಇದ್ದ ಮಾರುತಿ ಎಂಬ ಯುವಕ, ತಕ್ಷಣ ಇವರ ನೆರವಿಗೆ ಧಾವಿಸಿ, ನೀರಿನ ರಭಸವನ್ನು ಲೆಕ್ಕಿಸದೇ ಸ್ನೇಹಿತರ ಸಹಾಯದಿಂದ ತಂದೆ - ಮಗ ಜೊತೆ ವಾಹನವನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Bengaluru Rain: ಯಲಹಂಕದಲ್ಲಿ ವರುಣಾರ್ಭಟಕ್ಕೆ ಹಲವೆಡೆ ಅವಾಂತರ

ಕಳೆದ ಕೆಲ ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ಭಾನುವಾರ ಮಳೆ ಕೊಂಚ ಬಿಡುವು ನೀಡಿದೆ. ಈಗಾಗಲೇ ಕೆರೆ,ಕಟ್ಟೆ ಕಾಲುವೆ ಬಳಿ ಯಾರು ಹೋಗದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡುತ್ತಿದ್ದರೂ ಸಹ ಜನ ದುಸಾಹಸಕ್ಕೆ ಮುಂದಾಗುತ್ತಿರುವುದು ದುರಾದೃಷ್ಟ.

ಇದನ್ನೂ ಓದಿ: ಹಾಲಕೆರೆ ಅನ್ನದಾನೇಶ್ವರ ಸ್ವಾಮೀಜಿ ಲಿಂಗೈಕ್ಯ: ಸಿಎಂ ಸಂತಾಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.