ETV Bharat / state

ನೂತನ‌ ವರ್ಷಾಚರಣೆಗೆ ನಂದಿ ಬೆಟ್ಟ ಹೌಸ್‌ಫುಲ್; ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್ - ನಂದಿ ದೇವಸ್ಥಾನ

ಈ ಸಲ ವೀಕೆಂಡ್​ ದಿನವೇ ಬಂದ ನ್ಯೂ ಇಯರ್ ಬಂದಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಸಮೀಪವಿರುವ ಪ್ರಸಿದ್ಧ ಗಿರಿಧಾಮ ನಂದಿಗಿರಿಗೆ ಪ್ರವಾಸಿಗರ ದಂಡೇ ಹರಿದುಬಂದಿತ್ತು.

Traffic jam caused by large number of tourists arriving at Nandigiri Dham
ನಂದಿಗಿರಿ ಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರಿಂದ ಉಂಟಾದ ಟ್ರಾಫಿಕ್​ ಜಾಮ್​
author img

By

Published : Jan 2, 2023, 7:04 AM IST

Updated : Jan 2, 2023, 9:58 AM IST

ಹೊಸ ವರ್ಷಕ್ಕೆ ಚಿಕ್ಕಬಳ್ಳಾಪುರದ ಜನಪ್ರಿಯ ಗಿರಿಧಾಮ ನಂದಿಬೆಟ್ಟದಲ್ಲಿ ಜನಜಾತ್ರೆ

ಚಿಕ್ಕಬಳ್ಳಾಪುರ: ಪ್ರವಾಸಿಗರ ನೆಚ್ಚಿನ ತಾಣ ಇಲ್ಲಿನ ನಂದಿ ಗಿರಿಧಾಮದಲ್ಲಿ ನೂತನ ವರ್ಷಾಚರಣೆಗೆ ನಿನ್ನೆ 15 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು. ಹೀಗಾಗಿ, ಸುಮಾರು 4 ಗಂಟೆಗೂ‌ ಅಧಿಕ‌ ಸಮಯ ಟ್ರಾಫಿಕ್ ಸಮಸ್ಯೆಯಿಂದ ಸವಾರರು ಪರದಾಡಿದ್ದಾರೆ.

ವೀಕೆಂಡ್ ಜೊತೆಗೆ ನೂತನ ವರ್ಷವೂ ಸಹ ಭಾನುವಾರದಂದೇ ಬಂದಿದ್ದು ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ಹೊಸ ವರ್ಷ ಅಲ್ಲದೇ ಇದ್ದರೂ ವೀಕೆಂಡ್‌ನಲ್ಲಿ ನಂದಿ ಹಿಲ್ಸ್‌ಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಭೇಟಿ ನೀಡುತ್ತಿರುತ್ತಾರೆ.

ಆದರೆ ನೂತನ ವರ್ಷಾಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬೆಟ್ಟಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಐದಾರು ಕಿಲೋಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಸಂಕಟ ಅನುಭವಿಸಿದ್ದಾರೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು ಪೊಲೀಸರು ಹರಸಾಹಸಪಟ್ಟರು.

ಬೆಟ್ಟದ ಬುಡದಿಂದ ತುದಿಯವರೆಗೂ ಪೊಲೀಸ್ ಇಲಾಖೆ ಬಂದೋಬಸ್ತ್ ಏರ್ಪಡಿಸಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿತ್ತು. ಇನ್ನು ಸುತ್ತಮುತ್ತಲಿನ ನಂದಿ ದೇವಸ್ಥಾನ, ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರ, ಕೈಲಾಸಗಿರಿ, ಅಂಬಾಜಿದುರ್ಗ ಬೆಟ್ಟ, ಗುಡಿಬಂಡೆ ಕೋಟೆ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳು ನಿನ್ನೆ ಪ್ರವಾಸಿಗರಿಂದ ತುಳುಕುತ್ತಿದ್ದವು.

ಇದನ್ನೂ ಓದಿ: ವೀಕೆಂಡ್, ಇಯರ್ ಎಂಡ್.. ಕೊಡಗಿನಲ್ಲಿ ಪ್ರವಾಸಿಗರ ದಂಡು

Last Updated : Jan 2, 2023, 9:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.