ಚಿಕ್ಕಬಳ್ಳಾಪುರ : ಚಂಡಮಾರುತ ಹಿನ್ನೆಲೆ ಕಳೆದ 10 ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಗೆ ಟೊಮೆಟೊ ಬೆಳೆ ಸಂಪೂರ್ಣ ಕೊಳೆತು ಹೋಗಿದ್ದು, ರೈತರು ಕಂಗಾಲಾಗಿದ್ದಾರೆ.
ಚಂಡಮಾರುತದ ಎಫೆಕ್ಟ್‌ನಿಂದ ತುಂತುರು ಮಳೆಗೆ ಸೊಂಪಾಗಿ ಬೆಳೆದು ನಿಂತಿದ್ದ ಟೊಮೆಟೊ ಬೆಳೆ ಸಂಪೂರ್ಣ ಕೊಳೆತು ಹೋಗಿದೆ.
ಇದರಿಂದ ಬೇಸತ್ತ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಶಾಪುರ ಗ್ರಾಮದ ರೈತರು ಲೋಡ್ಗಟ್ಟಲೇ ಟೊಮೆಟೊವನ್ನು ರಸ್ತೆ ಬದಿಯ ಗುಂಡಿಗಳಿಗೆ ಸುರಿದಿದ್ದಾರೆ. ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್ ಟೊಮೆಟೊಗೆ 250 ರೂ. ಬೆಲೆ ಇದ್ದರೂ ರೈತರಿಗೆ ಪ್ರಯೋಜನವಿಲ್ಲದಂತಾಗಿದೆ.